ನವದೆಹಲಿ(ಅ.04): ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಆಟಗಾರರು ಹಾಗೂ ವಿಶ್ಲೇಷಕರು ತಮ್ಮ ಕನಸಿನ ತಂಡವನ್ನು ಆಯ್ಕೆ ಮಾಡಿಕೊಳ್ಳುವುದು ಸರ್ವೆಸಾಮಾನ್ಯವಾಗಿ ಬಿಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾನ್ಪುರದಲ್ಲಿ ನಡೆದ ಭಾರತ 500ನೆ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಭಾರತದ ಕನಸಿನ ತಂಡವನ್ನು ರಚಿಸಲು ಬಿಸಿಸಿಐ ಆಹ್ವಾನ ನೀಡಿತ್ತು. ಲಕ್ಷಾಂತರ ಅಭಿಮಾನಿಗಳು ಸೇರಿ ಭಾರತದ ಸಾರ್ವಕಾಲಿಕ ಕನಸಿನ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿದ್ದರು.

ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಕೂಡ ತಮ್ಮ ಕನಸಿನ ತಂಡವನ್ನು ಆಯ್ಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಸಾರ್ವಕಾಲಿಕ ಕನಸಿನ ತಂಡದ ಸಾರಥ್ಯವನ್ನು ಅನಿಲ್ ಕುಂಬ್ಳೆಗೆ ನೀಡಿದ್ದಾರೆ.

ಹರ್ಷ ಕನಸಿನ ತಂಡದಲ್ಲಿರುವ ಬಹುತೇಕ ಆಟಗಾರರನ್ನು ಅಭಿಮಾನಿಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಬ್ಯಾಟಿಂಗ್ ಮಾತ್ರವಲ್ಲದೇ ಜಗತ್ತಿನ ಶ್ರೇಷ್ಟ ನಾಯಕರಲ್ಲಿ ಒಬ್ಬರು ಎಂದೇ ಕರೆಸಿಕೊಳ್ಳುವ ಸೌರವ್ ಗಂಗೂಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.

ಇನ್ನು ಸುನೀಲ್ ಗವಾಸ್ಕರ್, ಮೊಹಮ್ಮದ್ ಅಜರುದ್ದೀನ್, ಕಪಿಲ್ ದೇವ್, ಮಹೇಂದ್ರ ಸಿಂಗ್ ಧೋನಿ ಅವರಂತಹ ದಿಗ್ಗಜ ನಾಯಕರನ್ನು ಬಿಟ್ಟು ಅನಿಲ್ ಕುಂಬ್ಳೆ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಎಲ್ಲರ ಹುಬ್ಬೆರುವಂತೆ ಮಾಡಿದೆ.

ಭೋಗ್ಲೆ ಕನಸಿನ ತಂಡ ಇಂತಿದೆ:

ಸುನಿಲ್ ಗವಾಸ್ಕರ್, ವಿರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ವಿವಿಎಸ್ ಲಕ್ಷ್ಮಣ್, ಕಪಿಲ್ ದೇವ್, ಎಂಎಸ್ ಧೋನಿ, ರವಿಚಂದ್ರನ್ ಅಶ್ವಿನ್, ಅನಿಲ್ ಕುಂಬ್ಳೆ(ನಾಯಕ), ಜಹೀರ್ ಖಾನ್.