ಇದೀಗ ಮಾಹಿಯ ಅಬ್ಬರದ ಬ್ಯಾಟಿಂಗ್ ನೋಡಿದ ಹರ್ಷಾ ಗೋಯೆಂಕಾ ಟ್ವೀಟ್ ಮಾಡಿದ್ದು ಹೀಗೆ...

ಬೆಂಗಳೂರು(ಮೇ.17): ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಕಳೆಗುಂದುತ್ತಿದೆ

ಎನ್ನುತ್ತಿದ್ದವರಿಗೆ ಮುಂಬೈ ಇಂಡಿಯನ್ಸ್ ಎದುರು ಮಾಹಿ ತಮ್ಮ ಬ್ಯಾಟಿಂಗ್ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ.

ಹೌದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಮಹೇಂದ್ರ ಸಿಂಗ್ ಧೋನಿ ಕೇವಲ 26 ಎಸೆತಗಳಲ್ಲಿ ಅಜೇಯ 40ರನ್ ಬಾರಿಸಿ ತಂಡಕ್ಕೆ ನೆರವಾದರು. ಅವರ ಭರ್ಜರಿ ಇನಿಂಗ್ಸ್'ನಲ್ಲಿ ಐದು ಮನಮೋಹಕ ಸಿಕ್ಸರ್'ಗಳೂ ಸೇರಿದ್ದವು ಎನ್ನುವುದು ಇನ್ನೊಂದು ವಿಶೇಷ.

ಐಪಿಎಲ್ ಆರಂಭದಿಂದಲೂ ಪುಣೆ ಸೂಪರ್'ಜೈಂಟ್ ತಂಡದ ಸಹಮಾಲಿಕ ಹರ್ಷಾ ಗೋಯೆಂಕಾ ಟ್ವಿಟರ್'ನಲ್ಲಿ ಪದೇಪದೇ ಮಾಹಿಯ ಕಾಲೆಯುತ್ತಿದ್ದರು. ಹರ್ಷಾ ಗೋಯೆಂಕಾ ಮಾಹಿ ಕುರಿತು ಮಾಡುವ ಪ್ರತಿ ಟ್ವೀಟ್ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೀಡಾಗುತ್ತಿತ್ತು. ಇದೀಗ ಮಾಹಿಯ ಅಬ್ಬರದ ಬ್ಯಾಟಿಂಗ್ ನೋಡಿದ ಹರ್ಷಾ ಗೋಯೆಂಕಾ ಟ್ವೀಟ್ ಮಾಡಿದ್ದು ಹೀಗೆ...

Scroll to load tweet…

ಈ ಬಾರಿ ಕಾಲೆಳೆದಿಲ್ಲ ಬದಲಾಗಿ ಕೊಂಡಾಡಿದ್ದಾರೆ...