ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಲ್ರೌಂಡರ್ ಹರ್ಮನ್ ಪ್ರೀತ್ ಕೌರ್ ಗಾಯಾಳುವಾಗಿದ್ದಾರೆ. ಹೀಗಾಗಿ ಅವರು ಇಂಗ್ಲೆಂಡ್'ನಲ್ಲಿ ನಡೆಯಲಿರುವ ಸೂಪರ್ ಸೀರೀಸ್'ನಲ್ಲಿ ಭಾಗವಹಿಸುವುದಿಲ್ಲ. ಕೌರ್ ಆಗಸ್ಟ್ 10 ರಿಂದ ಸೆಪ್ಟೆಂಬರ್ 1ರವರೆಗೆ ನಡೆಯಲಿರುವ ಟಿ 20 ಟೂರ್ನಮೆಂಟ್'ನಲ್ಲಿ ಸರ್ರೆ ಸ್ಟಾರ್ಸ್ ಪರವಾಗಿ ಅವರು ಆಡಬೇಕಿತ್ತು. ಆದರೆ ಗಾಯಾಳು ಆಗಿರುವ ಟೀಂ ಇಂಡಿಯಾದ ಲೇಡಿ ಸೆಹ್ವಾಗ್ ೀ ಸೀರೀಸ್'ನಲ್ಲಿ ಪಾಲ್ಗೊಳ್ಳುತ್ತಿಲ್ಲ.
ನವದೆಹಲಿ(ಆ.01): ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಲ್ರೌಂಡರ್ ಹರ್ಮನ್ ಪ್ರೀತ್ ಕೌರ್ ಗಾಯಾಳುವಾಗಿದ್ದಾರೆ. ಹೀಗಾಗಿ ಅವರು ಇಂಗ್ಲೆಂಡ್'ನಲ್ಲಿ ನಡೆಯಲಿರುವ ಸೂಪರ್ ಸೀರೀಸ್'ನಲ್ಲಿ ಭಾಗವಹಿಸುವುದಿಲ್ಲ. ಕೌರ್ ಆಗಸ್ಟ್ 10 ರಿಂದ ಸೆಪ್ಟೆಂಬರ್ 1ರವರೆಗೆ ನಡೆಯಲಿರುವ ಟಿ 20 ಟೂರ್ನಮೆಂಟ್'ನಲ್ಲಿ ಸರ್ರೆ ಸ್ಟಾರ್ಸ್ ಪರವಾಗಿ ಅವರು ಆಡಬೇಕಿತ್ತು. ಆದರೆ ಗಾಯಾಳು ಆಗಿರುವ ಟೀಂ ಇಂಡಿಯಾದ ಲೇಡಿ ಸೆಹ್ವಾಗ್ ೀ ಸೀರೀಸ್'ನಲ್ಲಿ ಪಾಲ್ಗೊಳ್ಳುತ್ತಿಲ್ಲ.

ಕೆಲ ದಿನಗಳ ಹಿಂದಷ್ಟೇ ನಡೆದ ಮಹಿಳಾ ವಿಶ್ವಕಪ್ ಪಂದ್ಯದ ಬಳಿಕ ಹರ್ಮನ್ ಪ್ರೀತ್'ರವರ ಭುಜದ ಎಮ್'ಐಆರ್ ಮಾಡಲಾಗಿತ್ತು. ಈ ರಿಪೋರ್ಟ್ ಅನ್ವಯ ಅವರಿಗೆ ಒಂದು ತಿಂಗಳು ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. MRI ಸ್ಕ್ಯಾನ್'ನಲ್ಲಿ ಇವರ ಎಡ ಭುಜಕ್ಕೆ ಗಾಯವಾಗಿರುವುದು ತಿಳಿದು ಬಂದಿದೆ. ಇನ್ನು ಹರ್ಮನ್ ಪ್ರೀತ್ ಕೂಡಾ ತಾನು ವಿಶ್ವಕಪ್'ನ ಅಂತಿಮ ಪಂದ್ಯದಲ್ಲಿ ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ. ಆದರೆ ತನ್ನ ಫಿಜಿಯೋ ಪಂದ್ಯದಲ್ಲಿ ಆಡಬಹುದು ಎಂದು ತಿಳಿಸಿದ್ದರು ಎಂದು ಹೇಳಿದ್ದಾರೆ.
ಇನ್ನು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಹರ್ಮನ್ ಪ್ರೀತ್ 'ಒಂದು ವೇಳೆ ನಾನು ಪಾಲ್ಗೊಳ್ಳಲು ಸಮರ್ಥಳಾಗಿದ್ದರೆ ನನಗೆ ತುಂಬಾ ಖುಷಿಯಾಗುತ್ತಿತ್ತು. ಕಳೆದ ಬಾರಿಯ ಮಹಿಳಾ ಬಿಗ್ ಬ್ಯಾಷ್ ಲೀಗ್'ನಲ್ಲಿ ಸಿಡ್ನಿ ತಂಡರ್'ನೊಂದಿಗಿನ ಪಂದ್ಯ ಅತ್ಯುತ್ತಮವಾಗಿತ್ತು. ಈ ಸಂದರ್ಭದಲ್ಲಿ ನನ್ನ ಆತ್ಮವಿಶ್ವಾಸ ಹೆಚ್ಚಿತ್ತು. ನಾನು ವಿಶ್ವಕಪ್'ನಲ್ಲಿ ವಿಜೇತರಾದ ಇಂಗ್ಲೆಂಡ್ ತಂಡದ ಆಟಗಾರ್ತಿಯರಾದ ಸ್ಕಿವರ್, ಟೈಮಿ, ಬ್ಯೂಮಾಂಟ್, ಲಾರಾ ಮಾರ್ಷ್ ಹಾಗೂ ಎಲೆಕ್ಟ್ ಹಾರ್ಟಲಿ ಜೊತೆ ಆಡಲು ಅತ್ಯುತ್ಸುಕಳಾಗಿದ್ದೆ' ಎಂದಿದ್ದಾರೆ.
