ಇಂಗ್ಲೆಂಡ್ ಟಿ20 ಲೀಗ್ ಟೂರ್ನಿ ಆಡಲಿದ್ದಾರೆ ಹರ್ಮನ್‌ಪ್ರೀತ್

First Published 1, Jul 2018, 1:20 PM IST
Harmanpreet Kaur set to play in UK’s T20 league
Highlights

ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಇದೀಗ ವಿದೇಶಿ ಲೀಗ್ ಟೂರ್ನಿಗಳಲ್ಲಿ ಬಾರಿ ಬೇಡಿಕೆ ಇದೆ. ಈ ವರ್ಷದ ಆರಂಭದಲ್ಲಿ ಸ್ಮೃತಿ ಮಂದನಾ ಇಂಗ್ಲೆಂಡ್ ಟಿ20 ಲೀಗ್ ಜೊತೆ ಒಪ್ಪಂದ ಮಾಡಿಕೊಂಡ ಬಳಿಕ ಇದೀಗ ಹರ್ಮನ್‌ಪ್ರೀತ್ ಕೌರ್ ಕೂಡ ಯುಕೆ ಲೀಗ್ ಆಡಲು ಸಜ್ಜಾಗಿದ್ದಾರೆ. ಹರ್ಮನ್‌ಪ್ರೀತ್ ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಇಲ್ಲಿದೆ ವಿವರ.

ನವದೆಹಲಿ(ಜು.01): ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಇಂಗ್ಲೆಂಡ್ ಟಿ20 ಲೀಗ್ ಟೂರ್ನಿ ಆಡಲು ಸಜ್ಜಾಗಿದ್ದಾರೆ. ಇಂಗ್ಲೆಂಡ್‌ನ ಸೂಪರ್‌ ಲೀಗ್‌ ಲ್ಯಾಂಕಶೈರ್‌ ಥಂಡರ್‌ ತಂಡದೊಂದಿಗೆ ಆಡಲು ಹರ್ಮನ್‌ಪ್ರೀತ್ ಒಪ್ಪಂದ ಮಾಡಿಕೊಂಡಿದ್ದಾರೆ.

ಲೀಗ್‌ನಲ್ಲಿ ಕಾಣಿಸಿಕೊಳ್ಳಲಿರುವ ಭಾರತದ 2ನೇ ಆಟಗಾರ್ತಿ ಎನ್ನುವ ಹೆಗ್ಗಳಿಕೆಗೆ ಹರ್ಮನ್‌ ಪಾತ್ರರಾಗಲಿದ್ದಾರೆ. ಈ ತಿಂಗಳ ಆರಂಭದಲ್ಲಿ ಸ್ಮೃತಿ ಮಂಧನಾ, ಹಾಲಿ ಚಾಂಪಿಯನ್‌ ವೆಸ್ಟರ್ನ್‌ ಸ್ಟಾಮ್‌ರ್‍ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

2018ರ ಆವೃತ್ತಿಯಲ್ಲಿ ಕಣಕ್ಕಿಳಿಯಲಿರುವ ಹರ್ಮನ್‌ಪ್ರೀತ್ ಕೌರ್ ಉತ್ತಮ ಪ್ರದರ್ಶನ ನೀಡೋ ವಿಶ್ವಾಸ ವ್ಯಕ್ತಪಡಿಸಿದ್ದಾರ. 2017ರಲ್ಲಿ ಸರ್ರೆ ಸ್ಟಾರ್ಸ್ ತಂಡದ ಪರ ಒಪ್ಪಂದ ಮಾಡಿಕೊಂಡಿದ್ದ ಹರ್ಮನ್ ಪ್ರೀತ್ ಕೌರ್ ಕೈಬೆರಳಿನ ಗಾಯದಿಂದ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. 

loader