ಸಿಯೆಟ್ ಕುಟುಂಬ ಸೇರಿಕೊಂಡಿದ್ದಕ್ಕೆ ಸಂತೋಷವಾಗುತ್ತಿದೆ ಎಂದು ಹರ್ಮನ್'ಪ್ರೀತ್ ಕೌರ್ ಟ್ವಿಟ್ಟರ್'ನಲ್ಲಿ ಬರೆದುಕೊಂಡಿದ್ದಾರೆ.

ಮುಂಬೈ(ಜ.23): ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹರ್ಮನ್‌'ಪ್ರೀತ್ ಕೌರ್, ಸಿಯೆಟ್ ಸಂಸ್ಥೆಯೊಂದಿಗೆ ಬ್ಯಾಟ್ ಪ್ರಾಯೋಜಕತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 2 ವರ್ಷಗಳ ಒಪ್ಪಂದ ಇದಾಗಿದೆ.

ಸಿಯೆಟ್‌'ನೊಂದಿಗೆ ಬ್ಯಾಟ್ ಪ್ರಾಯೋಜತ್ವ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಎನ್ನುವ ಹೆಗ್ಗಳಿಕೆಗೆ ಹರ್ಮನ್‌ಪ್ರೀತ್ ಪಾತ್ರರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ತಮ್ಮ ಬ್ಯಾಟ್ ಮೇಲೆ ಸಿಯೆಟ್ ಸ್ಟಿಕ್ಕರ್ ಹಾಕಿಕೊಂಡು ಆಡಲಿದ್ದಾರೆ. ರೋಹಿತ್, ರಹಾನೆ ಸದ್ಯ ಪ್ರತಿಷ್ಠಿತ ಸಂಸ್ಥೆಯೊಂದಿಗೆ ಒಪ್ಪಂದ ಹೊಂದಿದ್ದಾರೆ.

ಸಿಯೆಟ್ ಕುಟುಂಬ ಸೇರಿಕೊಂಡಿದ್ದಕ್ಕೆ ಸಂತೋಷವಾಗುತ್ತಿದೆ ಎಂದು ಹರ್ಮನ್'ಪ್ರೀತ್ ಕೌರ್ ಟ್ವಿಟ್ಟರ್'ನಲ್ಲಿ ಬರೆದುಕೊಂಡಿದ್ದಾರೆ.

Scroll to load tweet…

2017ರ ಮಹಿಳಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಹರ್ಮನ್, ಆಸ್ಟ್ರೇಲಿಯಾ ವಿರುದ್ಧ ಭರ್ಜರಿ 171 ರನ್ ಸಿಡಿಸುವ ಮೂಲಕ ವನಿತೆಯರ ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.