ಹೀಗೆ ಅವರಿಬ್ಬರ ಆಪ್ತ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಟ್ವಿಟರಿಗರು ಮೊದಲು ಕ್ರಿಕೆಟ್ ಬಗ್ಗೆ ಗಮನಕೊಡಿ ಎಂದು ಪಾಂಡ್ಯಗೆ ಕಿವಿ ಮಾತು ಹೇಳಿದ್ದಾರೆ.
ಬೆಂಗಳೂರು(ಸೆ.06): ಯುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಬಾಲಿವುಡ್ ತಾರೆ ಪರಿಣಿತಿ ಛೋಪ್ರಾ ನಡುವೆ ಟ್ವಿಟರ್'ನಲ್ಲೇ ಸಂದೇಶ ವಿನಿಮಯ ಮಾಡಿಕೊಂಡಿರುವುದು ಟ್ವಿಟರಿಗರನ್ನು ಹುಬ್ಬೇರುವಂತೆ ಮಾಡಿದೆ.
ಮೊದಲು ಸೈಕಲ್ ಚಿತ್ರದೊಂದಿಗೆ ಬಾಳ ಸಂಗಾತಿಯ ಬಗ್ಗೆ ಕಲ್ಪನೆ ಬಿಚ್ಚಿಟ್ಟ ಪರಿಣಿತಿಗೆ, ಪಾಂಡ್ಯ ಇನ್ನೊಂದು ಬಾಲಿವುಡ್ ಮತ್ತು ಕ್ರಿಕೆಟ್ ಸಂಬಂಧವಾಗಬಹುದೇ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.
ಹೀಗೆ ಅವರಿಬ್ಬರ ಆಪ್ತ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಟ್ವಿಟರಿಗರು ಮೊದಲು ಕ್ರಿಕೆಟ್ ಬಗ್ಗೆ ಗಮನಕೊಡಿ ಎಂದು ಪಾಂಡ್ಯಗೆ ಕಿವಿ ಮಾತು ಹೇಳಿದ್ದಾರೆ.
ಈ ಮೊದಲು ಕೂಡಾ ಪರಿಣಿತಿ ಛೋಪ್ರಾ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಏನೋ ನಡೆಯುತ್ತಿದೆ ಎಂಬ ಗಾಳಿಸುದ್ದಿಗಳು ವೈರಲ್ ಆಗಿತ್ತು. ಆದರೆ ಈ ಮೇಲಿನ ಸಂದೇಶಗಳನ್ನು ಗಮನಿಸಿದರೆ ಏನೋ ಇದೆ ಅನುಮಾನ ಇನ್ನಷ್ಟು ದಟ್ಟವಾಗತೊಡಗಿದೆ.