Asianet Suvarna News Asianet Suvarna News

ಹಾರ್ದಿಕ್ ಪಾಂಡ್ಯ ಕೈಮೇಲೆ ಹೊಸ ಟ್ಯಾಟು!

ವಿಶ್ವಕಪ್ ಟೂರ್ನಿ ಬಳಿಕ ವಿಶ್ರಾಂತಿಗೆ  ಜಾರಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಮತ್ತೆ ಸದ್ದು ಮಾಡುತ್ತಿದ್ದಾರೆ. ಈ ಬಾರಿ ಬಿಡುವಿನ ವೇಳೆಯಲ್ಲಿ ಪಾಂಡ್ಯ ಟ್ಯಾಟೂ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

Hardik pandya lions tattoo become viral in social media
Author
Bengaluru, First Published Jul 28, 2019, 10:04 AM IST
  • Facebook
  • Twitter
  • Whatsapp

ನವದೆಹಲಿ(ಜು.28): ಭಾರತ ತಂಡದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ, ವಿಶ್ವಕಪ್‌ ಬಳಿಕ ವಿಶ್ರಾಂತಿಯಲ್ಲಿದ್ದಾರೆ. ವಿಂಡೀಸ್‌ ಪ್ರವಾಸದಿಂದ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ. ಬಿಡುವಿನ ಸಮಯದಲ್ಲಿ ಸುಮ್ಮನೆ ಕೂರುವ ಜಾಯಮಾನ ಹಾರ್ದಿಕ್ ಪಾಂಡ್ಯದಲ್ಲ. ಇದೀಗ  ಹೊಸ ಟ್ಯಾಟೂ ಹಾಕಿಸಿಕೊಂಡು ಸದ್ದು ಮಾಡಿದ್ದಾರೆ.

 

 
 
 
 
 
 
 
 
 
 
 
 
 

🦁 🌓 💫 🌌 🙌🏾

A post shared by Hardik Pandya (@hardikpandya93) on Jul 24, 2019 at 10:21pm PDT

ಇದನ್ನೂ ಓದಿ: ಕ್ರಿಕೆಟಿಗರಿಗೆ ಬಿಸಿಸಿಐ ನೀಡಿದೆ ವಿಶ್ರಾಂತಿ- ಹಾರ್ದಿಕ್ ಮಾತ್ರ ಫುಲ್ ಬ್ಯುಸಿ!

ಪಾಂಡ್ಯ ಬಿಡುವಿನ ಸಮಯದಲ್ಲಿ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಮ್ಮ ಎಡಗೈ ಮೇಲೆ ಸಿಂಹದ ಟ್ಯಾಟೂ ಹಾಕಿಸಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಾಕಿದ್ದಾರೆ. ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಟೀಂ ಇಂಡಿಯಾದಲ್ಲಿ ಟ್ಯಾಟ್ಯೂ ಕ್ರೇಜ್ ಹುಟ್ಟು ಹಾಕಿದ ಕೀರ್ತಿ ವಿರಾಟ್ ಕೊಹ್ಲಿಗೆ ಸಲ್ಲಲಿದೆ. ಬಳಿಕ ಕೆಎಲ್ ರಾಹುಲ್, ಮನೀಶ್ ಪಾಂಡೆ ಸೇರಿದಂತೆ ಹಲವು ಕ್ರಿಕೆಟಿಗರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದೀಗ ಪಾಂಡ್ಯ ಕೂಡ ಹೆಚ್ಚು ಹೆಚ್ಚು ಟ್ಯಾಟೂ ಹಾಕಿಸಿಕೊಂಡು ಸುದ್ದಿಯಾಗಿದ್ದಾರೆ.

Follow Us:
Download App:
  • android
  • ios