ಆಫ್ರಿಕಾ ವೇಗಿಗಳ ದಾಳಿಗೆ ತತ್ತರಿಸಿದ್ದ ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ಆಸರೆಯಾದರು.

ಕೇಪ್'ಟೌನ್(ಜ.06): ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ ಮೊದಲ ಟೆಸ್ಟ್'ನ ಎರಡನೇ ದಿನದಾಟದ ಅಂತ್ಯಕ್ಕೆ ಕಮ್'ಬ್ಯಾಕ್ ಮಾಡುವತ್ತ ಹೆಜ್ಜೆ ಹಾಕಿದ್ದು ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್'ಮನ್'ಗಳನ್ನು ಪೆವಿಲಿಯನ್'ಗಟ್ಟಲು ಯಶಸ್ವಿಯಾಗಿದೆ.

ಟೀಂ ಇಂಡಿಯಾವನ್ನು ಕೇವಲ 209 ರನ್'ಗಳಿಗೆ ಕಟ್ಟಿಹಾಕಿ ಎರಡನೇ ಇನಿಂಗ್ಸ್ ಆರಂಭಿಸಿದ ಹರಿಣಗಳ ಪಡೆ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕ ಜೋಡಿಯಾದ ಮರ್ಕ್ರಾಮ್ ಹಾಗೂ ಎಲ್ಗಾರ್ ಮೊದಲ ವಿಕೆಟ್'ಗೆ 52 ರನ್ ಕಲೆಹಾಕಿತು. ಈ ವೇಳೆ ದಾಳಿಗಿಳಿದ ಹಾರ್ದಿಕ್ ಪಾಂಡ್ಯ ಕೇವಲ 2 ಓವರ್'ಗಳ ಅಂತರದಲ್ಲಿ ಆರಂಭಿಕರಿಬ್ಬರನ್ನು ಪೆವಿಲಿಯನ್'ಗೆ ಅಟ್ಟುವಲ್ಲಿ ಯಶಸ್ವಿಯಾದರು. ಎರಡನೇ ದಿನದಾಟ ಮುಕ್ತಾಯಕ್ಕೆ ದಕ್ಷಿಣ ಆಫ್ರಿಕಾ 2 ವಿಕೆಟ್ ಕಳೆದುಕೊಂಡು 65 ರನ್ ಬಾರಿಸಿದ್ದು ಒಟ್ಟಾರೆ 142 ರನ್'ಗಳ ಮುನ್ನಡೆ ಸಾಧಿಸಿದೆ.

ಇದಕ್ಕೂ ಮೊದಲು ಆಫ್ರಿಕಾ ವೇಗಿಗಳ ದಾಳಿಗೆ ತತ್ತರಿಸಿದ್ದ ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ಆಸರೆಯಾದರು. ಒಂದು ಹಂತದಲ್ಲಿ 92 ರನ್'ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಪಾಂಡ್ಯ(93) ಕೆಚ್ಚೆದೆಯ ಬ್ಯಾಟಿಂಗ್ ನೆರವಿನಿಂದ ಭಾರತ 200 ರ ಗಡಿ ಸಮೀಪಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ: 286& 65/2

ಮರ್ಕ್ರಾಮ್: 34

ಹಾರ್ದಿಕ್ ಪಾಂಡ್ಯ: 17/2

ಭಾರತ: 209/10

ಹಾರ್ದಿಕ್ ಪಾಂಡ್ಯ: 93

ಫಿಲಾಂಡರ್: 33/3

ಎರಡನೇ ದಿನದಾಟ ಮುಕ್ತಾಯಕ್ಕೆ