ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಈ ಬ್ರದರ್ಸ್ ಇಬ್ಬರೂ ಆ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದರು. ಆನ್'ಫೀಲ್ಡ್'ನಲ್ಲಿ ಅವರಿಬ್ಬರ ಮಧ್ಯೆ ಯಾವುದೇ ಘರ್ಷಣೆಯಾಗಿದ್ದಂತೂ ಇಲ್ಲ. ಆದರೆ, ಟ್ವಿಟ್ಟರ್'ನಲ್ಲಿ ಕಿತ್ತಾಡಿಕೊಳ್ಳುವಂಥದ್ದು ಏನು ನಡೆಯಿತು ಎಂಬುದು ಗೊತ್ತಿಲ್ಲ.

ಬೆಂಗಳೂರು: ಈ ಐಪಿಎಲ್ ಸೀಸಸ್'ನಲ್ಲಿ ಅತ್ಯಂತ ಖ್ಯಾತ ಬ್ರದರ್ಸ್ ಜೋಡಿ ಎನಿಸಿರುವ ಹಾರ್ದಿಕ್ ಪಾಂಡ್ಯ ಮತ್ತು ಕ್ರುಣಾಲ್ ಪಾಂಡ್ಯ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಜಗಳವಾಡಿಕೊಂಡ ಘಟನೆ ನಡೆದಿದೆ. ತಮ್ಮಿಂದ ಬಹಳ ನಿರಾಶೆಯಾಯಿತು ಎಂದು ಹಾರ್ದಿಕ್ ಪಾಂಡ್ಯ ತಮ್ಮ ಅಣ್ಣ ಕೃಣಾಳ್ ಪಾಂಡ್ಯ ಅವರನ್ನು ಕುಟುಕಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಕೃಣಾಳ್ ಅವರು, ಇದನ್ನು ಸುಮ್ಮನೆ ದೊಡ್ಡದು ಮಾಡಬೇಡ ಎಂದು ಟ್ವಿಟ್ಟರ್'ನಲ್ಲೇ ತಿಳಿಹೇಳಿದ್ದಾರೆ. ಮೊನ್ನೆ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ನಂತರ ಈ ಬೆಳವಣಿಗೆಯಾಗಿದೆ.

ಪಾಂಡ್ಯರು ಹೇಳಿದ್ದೇನು?
ನಿಮ್ಮ ಪರಮಾಪ್ತರು ನಿಮ್ಮನ್ನು ನಿರಾಶೆಗೊಳಿಸುವ ಪ್ರಸಂಗ ಜೀವನದಲ್ಲಿ ಕೆಲವೊಮ್ಮೆ ಎದುರಾಗುತ್ತದೆ. ಇದು ಸರಿಯಲ್ಲ, ಬ್ರೋ(ಸೋದರ) ಎಂದು ಹಾರ್ದಿಕ್ ಪಾಂಡ್ಯ ಒಗಟಿನ ರೀತಿಯಲ್ಲಿ ನಿನ್ನೆ ಬೆಳಗ್ಗೆ ಟ್ವೀಟ್ ಮಾಡಿದ್ದರು.

Scroll to load tweet…

ಅದಾದ ನಂತರ ಕ್ರುನಾಲ್ ಪಾಂಡ್ಯ ನೇರವಾಗಿ ತಮ್ಮನನ್ನು ಉಲ್ಲೇಖಿಸುತ್ತಾ, "ಇದು ಆಗಲೇಬಾರದಿತ್ತು. ನಾನು ಅಣ್ಣನಾಗಿರುವುದು ಸುಮ್ಮನೆ ಅಲ್ಲ. ನಾವಿದನ್ನು ದೊಡ್ಡದು ಮಾಡಬಾರದು!" ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಈ ಬ್ರದರ್ಸ್ ಇಬ್ಬರೂ ಆ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದರು. ಆನ್'ಫೀಲ್ಡ್'ನಲ್ಲಿ ಅವರಿಬ್ಬರ ಮಧ್ಯೆ ಯಾವುದೇ ಘರ್ಷಣೆಯಾಗಿದ್ದಂತೂ ಇಲ್ಲ. ಆದರೆ, ಟ್ವಿಟ್ಟರ್'ನಲ್ಲಿ ಕಿತ್ತಾಡಿಕೊಳ್ಳುವಂಥದ್ದು ಏನು ನಡೆಯಿತು ಎಂಬುದು ಗೊತ್ತಿಲ್ಲ. ಮಾಜಿ ಕ್ರಿಕೆಟಿಗ ವೀರೇಂದರ್ ಸೆಹ್ವಾಗ್ ಟ್ವಿಟ್ಟರ್'ನಲ್ಲೇ ಮಧ್ಯಪ್ರವೇಶಿಸಿ ರಾಜಿ ಸಂಧಾನ ಮಾಡಿದ್ದಾರೆ. "ಬಾಪ್ ಬಡಾ ನಾ ಭೈಯ್ಯಾ, ಸಬ್ಸೇ ಬಡಾ ರುಪೈಯ್ಯಾ - ಈ ಹಾಡನ್ನು ಗಂಭೀರವಾಗಿ ತೆಗೆದುಕೊಳ್ಳಬೇಡ್ರಪ್ಪಾ" ಎಂದು ಪಾಂಡ್ಯ ಬ್ರದರ್ಸ್'ಗೆ ಕಿವಿ ಮಾತು ಹೇಳಿದ್ದಾರೆ.

Scroll to load tweet…