ಐಪಿಎಲ್'ನಲ್ಲೂ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು.
ಲಂಡನ್(ಜೂ.08): ಭಾರತ ತಂಡದ ಆಲ್'ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆಯ ನುಡಿಗಳನ್ನಾಡಿದ್ದು, ‘ಪಾಂಡ್ಯ ಭಾರತ ಕ್ರಿಕೆಟ್'ನ ಪ್ರಮುಖ ಆಸ್ತಿ' ಎಂದು ಕೊಂಡಾಡಿದ್ದಾರೆ.
‘ಪಾಂಡ್ಯ ಬಹಳ ವರ್ಷಗಳ ಬಳಿಕ ಸಿಕ್ಕಿರುವ ಅತ್ಯುತ್ತಮ ಆಲ್ರೌಂಡರ್. 140 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವುದು ಮಾತ್ರವಲ್ಲದೇ ಅವರು, ಸ್ಫೋಟಕ ಬ್ಯಾಟಿಂಗ್ ಸಹ ನಡೆಸುತ್ತಾರೆ. ಅವರಂಥ ಆಟಗಾರರನ್ನು ಹುಡುಕುವುದು ಸುಲಭದ ಕೆಲಸವಲ್ಲ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ, ನಂತರ ಪಾಕಿಸ್ತಾನದ ವಿರುದ್ಧ ಸತತ ಮೂರು ಸಿಕ್ಸರ್ ಸಿಡಿಸಿ ಮಿಂಚಿದ್ದರು. ಐಪಿಎಲ್'ನಲ್ಲೂ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು.
