ಕೆಲದಿನಗಳ ಹಿಂದಷ್ಟೇ ಯುವಿ, ಮುಂಬೈನ ಬಾಂದ್ರಾದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ವಿದ್ಯುತ್ ಕಡಿತಗೊಂಡಿದೆ. ನಮಗೆ ಮತ್ತೆ ವಿದ್ಯುತ್ ಸಿಗಬಹುದಾ ಎಂದು ಬೇಸರದಿಂದ ಟ್ವೀಟ್ ಮಾಡಿದ್ದರು.ಇದಕ್ಕೆ ಪ್ರತಿಕ್ರಿಯಿಸಿರುವ ಹರ್ಭಜನ್ ಸಿಂಗ್, ’ಬಾದ್’ಶಹ ಬಿಲ್ ಟೈಂ ಪರ್ ದಿಯಾ ಕರೊ’[ ದೊರೆ ವಿದ್ಯತ್ ಬಿಲ್ ಸರಿಯಾದ ಸಮಯಕ್ಕೆ ಕಟ್ಟಿ] ಎಂದು ಯುವಿಯ ಕಾಲೆಳೆದಿದ್ದಾರೆ.
ಮುಂಬೈ(ಜೂ.06]: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಈಗ ಸುದ್ದಿಯಲ್ಲಿದ್ದಾರೆ. ದಶಕಗಳ ಕಾಲ ಪಂಜಾಬ್ ಹಾಗೂ ಟೀಂ ಇಂಡಿಯಾವನ್ನು ಪ್ರತಿನಿಧಿಸಿರುವ ಯುವಿ ಹಾಗೂ ಭಜ್ಜಿ ಆತ್ಮೀಯ ಸ್ನೇಹಿತರು ಕೂಡಾ ಹೌದು.
ಇದೀಗ ಆಫ್’ಸ್ಪಿನ್ನರ್ ಹರ್ಭಜನ್ ಸಿಂಗ್ ಆಲ್ರೌಂಡರ್ ಯುವಿಯನ್ನು ಟ್ವಿಟರ್’ನಲ್ಲಿ ಕಿಚಾಯಿಸುವ ಮೂಲಕ ಸುದ್ದಿಯಾಗಿದ್ದಾರೆ. ಹೌದು, ಕೆಲದಿನಗಳ ಹಿಂದಷ್ಟೇ ಯುವಿ, ಮುಂಬೈನ ಬಾಂದ್ರಾದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ವಿದ್ಯುತ್ ಕಡಿತಗೊಂಡಿದೆ. ನಮಗೆ ಮತ್ತೆ ವಿದ್ಯುತ್ ಸಿಗಬಹುದಾ ಎಂದು ಬೇಸರದಿಂದ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಹರ್ಭಜನ್ ಸಿಂಗ್, ’ಬಾದ್’ಶಹ ಬಿಲ್ ಟೈಂ ಪರ್ ದಿಯಾ ಕರೊ’[ ದೊರೆ ವಿದ್ಯತ್ ಬಿಲ್ ಸರಿಯಾದ ಸಮಯಕ್ಕೆ ಕಟ್ಟಿ] ಎಂದು ಯುವಿಯ ಕಾಲೆಳೆದಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್’ನಲ್ಲಿ ಹರ್ಭಜನ್ ಸಿಂಗ್ ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರೆ, ಯುವರಾಜ್ ಸಿಂಗ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರ ಕಣಕ್ಕಿಳಿದಿದ್ದರು.
ಸನ್’ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಚೆನ್ನೈ ಸೂಪರ್’ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು
