ಮುಂಬೈ ಪರ ಉತ್ತಮ ಬೌಲಿಂಗ್ ಸರಾಸರಿ ಹೊಂದಿದ್ದರೂ ತನ್ನನ್ನು ಕಡೆಗಣಿಸಿರುವುದು ನಿರಾಸೆ ಮೂಡಿಸಿದೆ ಎಂದು ಹೇಳಿದ್ದಾರೆ.

ಮುಂಬೈ(ಮೇ.25): ಐಪಿಎಲ್ ಪ್ಲೇ-ಆಫ್ ಹಾಗೂ ಪುಣೆ ಸೂಪರ್'ಜೈಂಟ್ ತಂಡದ ವಿರುದ್ಧ ತಾನು ಆಡುವ ಹನ್ನೊಂದರ ಬಳಗದಲ್ಲಿರಬೇಕಿತ್ತು ಎಂದು ಅನುಭವಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲವು ತಂತ್ರಗಾರಿಕೆಯಿಂದಾಗಿ ಭಜ್ಜಿ ಹೊರಗುಳಿಯಬೇಕಾಯಿತು ಎಂಬ ಮಾತನ್ನು ಒಪ್ಪದ ಆಫ್'ಸ್ಪಿನ್ನರ್, ಮುಂಬೈ ಪರ ಉತ್ತಮ ಬೌಲಿಂಗ್ ಸರಾಸರಿ ಹೊಂದಿದ್ದರೂ ತನ್ನನ್ನು ಕಡೆಗಣಿಸಿರುವುದು ನಿರಾಸೆ ಮೂಡಿಸಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷದವರೆಗೂ 11 ಮಂದಿ ಆಟಗಾರರನ್ನು ಆಯ್ಕೆ ಮಾಡುವ ಆಡಳಿತ ಮಂಡಳಿಯ ಭಾಗವಾಗಿದ್ದೆ. ಆದರೆ ಈ ಬಾರಿ ನಾನು ಹೆಚ್ಚಿನ ಸಮಯವನ್ನು ನನ್ನ ಕುಟುಂಬದೊಂದಿಗೆ ಕಳೆದೆ ಎಂದಿರುವ ಅವರು, ಮಹತ್ವದ ಪಂದ್ಯದಲ್ಲಿ ತಂಡದಿಂದ ಹೊರಗಿದ್ದು ಪಂದ್ಯ ವೀಕ್ಷಿಸಿದ್ದು ನನಗೆ ಸಾಕಷ್ಟು ನಿರಾಸೆ ಮೂಡಿಸಿದೆ ಎಂದಿದ್ದಾರೆ.