ಪಿಚ್ ನಿರ್ಮಾಣ ಮಾಡಿದ ಕ್ಯೂರೇಟರ್'ನ್ನು ಭಜ್ಜಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಭಜ್ಜಿ ಏನಂದ್ರೂ ಅಂತ ನೀವೇ ಒಮ್ಮೆ ನೋಡಿ...
ಮುಂಬೈ(ಮೇ.12): ಭಾರತದ ತಂಡದ ಹಿರಿಯ ಅನುಭವಿ ಆಫ್'ಸ್ಪಿನ್ನರ್ ಹರ್ಭಜನ ಸಿಂಗ್ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ರೋಚಕ ಸೋಲಿನ ಬಳಿಕ ವಾಂಖೆಡೆ ಪಿಚ್ ಗುಣಮಟ್ಟದ ಬಗ್ಗೆ ಹರಿಹಾಯ್ದಿದ್ದಾರೆ.
40 ಓವರ್'ಗಳಲ್ಲಿ 453ರನ್'ಗಳ ಹೊಳೆ ಹರಿಸಿದ ಮುಂಬೈ ಮತ್ತು ಪಂಜಾಬ್ ಬ್ಯಾಟ್ಸ್'ಮನ್'ಗಳ ಉಭಯ ತಂಡಗಳ ಬೌಲರ್'ಗಳನ್ನು ಮನಬಂದಂತೆ ದಂಡಿಸಿದರು.
ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡದ ಅನುಭವಿ ಆಟಗಾರ ಹರ್ಭಜನ್ ಸಿಂಗ್ ಕೇವಲ 3 ಓವರ್'ಗಳಲ್ಲಿ 15ರ ಸರಾಸರಿಯಂತೆ ಎದುರಾಳಿ ತಂಡಕ್ಕೆ 45ರನ್ ಬಿಟ್ಟುಕೊಟ್ಟರು. ಹೀಗಾಗಿ ಪಿಚ್ ನಿರ್ಮಾಣ ಮಾಡಿದ ಕ್ಯೂರೇಟರ್'ನ್ನು ಭಜ್ಜಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಭಜ್ಜಿ ಏನಂದ್ರೂ ಅಂತ ನೀವೇ ಒಮ್ಮೆ ನೋಡಿ...
