ಪಾಕಿಸ್ತಾನದ ನನ್'ಕಾಣಾಂ ದಲ್ಲಿ ಜನಿಸಿದ ಹರ್ಭಜನ್ ಪಾಕಿಸ್ತಾನದ ಕ್ರಿಕೆಟ್ ಬೋರ್ಡ್, ತಂಡಕ್ಕೆ ಆಯ್ಕೆ ಮಾಡಿರುವ ಮೊದಲ ಸಿಖ್ ಆಟಗಾರ. ತುಂಬಾ ಸಮಯದಿಂದ ನನ್'ಕಾಣಾಂ ಸಾಹಿವ್'ನ ಕ್ರಿಕೆಟ್ ತಂಡದ ಪರವಾಗಿ ಆಡುತ್ತಿದ್ದ ಹರ್ಭಜನ್ ಆ ತಂಡದ ನಾಯಕೂ ಆಗಿದ್ದ. ಸದ್ಯಕ್ಕೀಗ ಪಾಕಿಸ್ತಾನ ತಂಡಕ್ಕೆ ಆಯ್ಕೆಯಾಗಿರುವ ಹರ್ಭಜನ್ ಕ್ರಿಕೆಟ್ ಬೋರ್ಡ್'ಗೆ ಧನ್ಯವಾದ ತಿಳಿಸಿದ್ದಾನೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮೊದಲ ಸಿಖ್ ಆಟಗಾರನಾಗಿರುವ ಹರ್ಭಜನ್ ಈ ಮೂಲಕ ಹೊಸತೊಂದು ಇತಿಹಾಸ ನಿರ್ಮಿಸಿದ್ದಾನೆ.
ಇಸ್ಲಮಾಬಾದ್(ಡಿ.17): ಹರ್ಭಜನ್ ಸಿಂಗ್ ಪಾಕಿಸ್ತಾನ ತಂಡದಲ್ಲಿ ಆಡುತ್ತಾರೆ. ಅಯ್ಯೋ ಭಜ್ಜಿಗ್ಯಾಕೆ ಪಾಕಿಸ್ತಾನದ ಸಹವಾಸ ಅಂತ ಅಂಕೊಳ್ಳಬೇಡಿ. ನಾವು ಹೇಳುತ್ತಿರುವುದು ನಮ್ಮ ಟರ್ಬನೇಟರ್ ಭಜ್ಜಿ ಬಗ್ಗೆ ಅಲ್ಲ, ಪಾಕಿಸ್ತಾನದ ಅಂಡರ್ 19 ತಂಡಕ್ಕೆ ಆಯ್ಕೆಯಾದ ಹರ್ಭಜನ್ ಸಿಂಗ್ ಹೆಸರಿನ ಯುವಕನ ಬಗ್ಗೆ.