ಅದೂ ಟೆಸ್ಟ್, ಏಕದಿನ ಇಲ್ಲವೇ ಟಿ20 ಮಾದರಿಯ ಕ್ರಿಕೆಟ್ ಆಗಿದ್ದರೂ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದ ಡೆಲ್ಲಿ ಕ್ರಿಕೆಟಿಗ, ಇಂದಿಗೂ ಸಾಕಷ್ಟು ಯುವ ಕ್ರಿಕೆಟಿಗರಿಗೆ ರೋಲ್ ಮಾಡಲ್ ಎಂದರೆ ಅತಿಶಯೋಕ್ತಿಯಲ್ಲ.
ಟೀಂ ಇಂಡಿಯಾ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟ್ಸ್'ಮನ್ ಎಂದೇ ಕರೆಸಿಕೊಳ್ಳುವ ವಿರೇಂದ್ರ ಸೆಹ್ವಾಗ್ ಇಂದು 39ನೇ ವಸಂತಕ್ಕೆ ಕಾಲಿರಿಸಿದ್ದಾರೆ.
ವಿಶ್ವ ಟೆಸ್ಟ್ ಕ್ರಿಕೆಟ್'ನಲ್ಲಿ ಸನತ್ ಜಯಸೂರ್ಯ, ಹರ್ಷಲ್ ಗಿಬ್ಸ್, ಮ್ಯಾಥ್ಯೂ ಹೇಡನ್ ಅವರಂತಹ ಶ್ರೇಷ್ಠ ಆರಂಭಿಕರನ್ನು ಕಂಡಿದ್ದರೂ, ಬಾಲ್ ಇರುವುದೇ ಬೌಂಡರಿ ಗೆರೆ ದಾಟಿಸುವುದಕ್ಕೆ ಎಂಬ ಹೊಡಿಬಡಿ ಆಟವಾಡುತ್ತಿದ್ದ ಸೆಹ್ವಾಗ್ ಇಂದಿಗೂ ಕ್ರಿಕೆಟ್ ಅಭಿಮಾನಿಗಳಪಾಲಿನ ನಿಜವಾದ ಎಂಟರ್'ಟೈನರ್. ಕ್ರಿಕೆಟ್ ನಿವೃತ್ತಿಯ ಬಳಿಕ ಟ್ವಿಟರ್'ನಲ್ಲಿ ಸಾಕಷ್ಟು ಸಕ್ರಿಯವಾಗಿರುವ ಸೆಹ್ವಾಗ್ ಕ್ರಿಕೆಟ್ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮ್ಯಾಥ್ಯೂ ಹೇಡನ್ ಅವರೇ ಹೇಳಿದಂತೆ, ' ಸೆಹ್ವಾಗ್ ಎಲ್ಲಾ ದ್ವಂಸ ಮಾಡಬಲ್ಲ ಸ್ಫೋಟಕ ಬ್ಯಾಟ್ಸ್'ಮನ್. ಟೆಸ್ಟ್ ಕ್ರಿಕೆಟ್'ನಲ್ಲೂ ಮೊದಲ ಬಾಲ್'ನಿಂದಲೇ ಎದೆಬಡಿತವನ್ನು ಹೆಚ್ಚಿಸುವ ಆಟಗಾರ. ಇಂದಿಗೂ ಟೆಸ್ಟ್ ಕ್ರಿಕೆಟ್ ಜೀವಂತವಾಗಿದೆ ಎಂದರೆ ಅದಕ್ಕೆ ಕಾರಣ ಸೆಹ್ವಾಗ್ ಅವರಂತಹ ಆಟಗಾರ ಎಂದು ಅಭಿಪ್ರಾಯ ಪಟ್ಟಿದ್ದರು.
ನಿರ್ಭಿತಿಯಿಂದ ಬ್ಯಾಟ್ ಬೀಸುವ ಛಾತಿ ಹೊಂದಿದ್ದ ಸೆಹ್ವಾಗ್ ಟೆಸ್ಟ್ ಕ್ರಿಕೆಟ್'ನಲ್ಲಿ 2 ತ್ರಿಶತಕ ಸಿಡಿಸಿದ ಭಾರತದ ಮೊದಲ ಹಾಗೂ ಏಕೈಕ ಆಟಗಾರ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ. ಟೆಸ್ಟ್ ಕ್ರಿಕೆಟ್'ನಲ್ಲಿ ಸೆಹ್ವಾಗ್ ಬಾರಿಸಿದ್ದ ಗರಿಷ್ಟ ಮೊತ್ತ 319 ಆದರೆ, ಏಕದಿನ ಕ್ರಿಕೆಟ್'ನಲ್ಲಿ ಬಾರಿಸಿದ ಗರಿಷ್ಟ ಮೊತ್ತ 209..! ಅಲ್ಲದೇ ಏಕದಿನ ಕ್ರಿಕೆಟ್'ನಲ್ಲಿ ದ್ವಿಶತಕ ಬಾರಿಸಿದ ಎರಡನೇ ಆಟಗಾರ ಎಂಬ ದಾಖಲೆಯನ್ನು ಸೆಹ್ವಾಗ್ ನಿರ್ಮಿಸಿದ್ದರು.
ಅದೂ ಟೆಸ್ಟ್, ಏಕದಿನ ಇಲ್ಲವೇ ಟಿ20 ಮಾದರಿಯ ಕ್ರಿಕೆಟ್ ಆಗಿದ್ದರೂ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದ ಡೆಲ್ಲಿ ಕ್ರಿಕೆಟಿಗ, ಇಂದಿಗೂ ಸಾಕಷ್ಟು ಯುವ ಕ್ರಿಕೆಟಿಗರಿಗೆ ರೋಲ್ ಮಾಡಲ್ ಎಂದರೆ ಅತಿಶಯೋಕ್ತಿಯಲ್ಲ.
