ಭಾರತ ಟೆಸ್ಟ್ ತಂಡದ ಆಧಾರಸ್ತಂಭವಾಗಿದ್ದ ದ್ರಾವಿಡ್ 164 ಟೆಸ್ಟ್ ಪಂದ್ಯಗಳಲ್ಲಿ 52.31ರ ಸರಾಸರಿಯಲ್ಲಿ 13,288 ರನ್ ಬಾರಿಸಿದ್ದಾರೆ.

ನವದೆಹಲಿ(ಜ.11): ಕ್ರಿಕೆಟ್ ಜಗತ್ತು ಕಂಡ ಸಭ್ಯ ಆಟಗಾರರಲ್ಲಿ ಒಬ್ಬರು ಎಂದೇ ಕರೆಸಿಕೊಳ್ಳುವ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗಿಂದು 43ನೇ ಹುಟ್ಟುಹಬ್ಬದ ಸಂಭ್ರಮ.

ಪ್ರಸ್ತುತ ಕಿರಿಯರ ಟೀಂ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ವಾಲ್ ಖ್ಯಾತಿಯ ದ್ರಾವಿಡ್'ಗೆ ಸಹಆಟಗಾರ ವಿರೇಂದ್ರ ಸೆಹ್ವಾಗ್ ಟ್ವಿಟ್ಟರ್'ನಲ್ಲಿ ಹೃದಯಸ್ಪರ್ಷಿ ಶುಭಾಶಯ ಕೋರಿದ್ದಾರೆ.

ಸೆಹ್ವಾಗ್ ಬರ್ಥ್'ಡೇ ಬಾಯ್ ದ್ರಾವಿಡ್'ಗೆ ಶುಭಕೋರಿದ್ದು ಹೀಗೆ...

Scroll to load tweet…

ಭಾರತ ಟೆಸ್ಟ್ ತಂಡದ ಆಧಾರಸ್ತಂಭವಾಗಿದ್ದ ದ್ರಾವಿಡ್ 164 ಟೆಸ್ಟ್ ಪಂದ್ಯಗಳಲ್ಲಿ 52.31ರ ಸರಾಸರಿಯಲ್ಲಿ 13,288 ರನ್ ಬಾರಿಸಿದ್ದಾರೆ. ಇನ್ನು ಏಕದಿನ ಪಂದ್ಯದಲ್ಲೂ 10,889 ರನ್(344 ಪಂದ್ಯ)ಗಳನ್ನು ಕಲೆಹಾಕಿದ್ದಾರೆ.

ಸುವರ್ಣನ್ಯೂಸ್ ವತಿಯಿಂದಲೂ ಕನ್ನಡಿಗ ರಾಹುಲ್ ದ್ರಾವಿಡ್'ಗೆ ಹುಟ್ಟುಹಬ್ಬದ ಶುಭಾಶಗಳು...