2017ರಲ್ಲಿ ಭಾರತದ ಮೊದಲ ಸೂಪರ್ ಸೀರಿಸ್'ನಲ್ಲಿ ಕರೋಲಿನಾ ಮರೀನ್ ಮಣಿಸಿ ವಿಶ್ವ ಶ್ರೇಯಾಂಕದಲ್ಲಿ ನಂ.2 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದರು.
ಬೆಂಗಳೂರು(ಜು.05): ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು 22ನೇ ವಸಂತಕ್ಕೆ ಕಾಲಿರಿಸಿದ್ದಾರೆ.
2016ರ ರಿಯೊ ಒಲಿಂಪಿಕ್ಸ್'ನಲ್ಲಿ ದೇಶಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟ ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.
2017ರಲ್ಲಿ ಭಾರತದ ಮೊದಲ ಸೂಪರ್ ಸೀರಿಸ್'ನಲ್ಲಿ ಕರೋಲಿನಾ ಮರೀನ್ ಮಣಿಸಿ ವಿಶ್ವ ಶ್ರೇಯಾಂಕದಲ್ಲಿ ನಂ.2 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದರು. ಇದೀಗ ಸಿಂಧು ವಿಶ್ವ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿದ್ದಾರೆ.
ಸುವರ್ಣ ನ್ಯೂಸ್ ಬಳಗದ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು ಸಿಂಧು..
