ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಪಂದ್ಯವೊಂದರಲ್ಲಿ ಧೋನಿ ಸ್ಟಂಪ್’ಔಟ್ ಆಗುವುದರಿಂದ ಬಚಾವಾದ ಚಿತ್ರವೊಂದನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿದ್ದ ಸೆಹ್ವಾಗ್, ನಿಮ್ಮ ಬದುಕು ಸುಖ ಸಂತೋಷದಿಂದ ಕೂಡಿರಲಿ, ಓಂ ಫಿನಿಷಾಯ ನಮಃ ಎಂದು ಟ್ವೀಟ್ ಮಾಡಿದ್ದರು.
ಬೆಂಗಳೂರು[ಜು.07]: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ವಿಚಿತ್ರವಾಗಿ ಶುಭಕೋರುವ ಮೂಲಕ ವಿರೇಂದ್ರ ಸೆಹ್ವಾಗ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಪಂದ್ಯವೊಂದರಲ್ಲಿ ಧೋನಿ ಸ್ಟಂಪ್’ಔಟ್ ಆಗುವುದರಿಂದ ಬಚಾವಾದ ಚಿತ್ರವೊಂದನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿದ್ದ ಸೆಹ್ವಾಗ್, ನಿಮ್ಮ ಬದುಕು ಸುಖ ಸಂತೋಷದಿಂದ ಕೂಡಿರಲಿ, ಓಂ ಫಿನಿಷಾಯ ನಮಃ ಎಂದು ಟ್ವೀಟ್ ಮಾಡಿದ್ದರು.
ಸೆಹ್ವಾಗ್ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದರೆ, 71 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಸೆಹ್ವಾಗ್ ಟ್ವೀಟ್’ಗೆ ಕೆಲ ಅಭಿಮಾನಿಗಳು ನೀಡಿದ ಪ್ರತಿಕ್ರಿಯೆ ಹೀಗಿತ್ತು...