ಪ್ರಸ್ತುತ ರಾಜ್ಯ ರಣಜಿ ತಂಡದ ನಾಯಕ ಆರ್. ವಿನಯ್ ಕುಮಾರ್ 34ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಸತತ ಎರಡು ಬಾರಿ ರಾಜಕ್ಕೆ ರಣಜಿ ಟ್ರೋಫಿ ಗೆದ್ದುಕೊಟ್ಟ ನಾಯಕ. ಮುಂಬರುವ ಐಪಿಎಲ್'ನಲ್ಲಿ ಕೊಲ್ಕತಾ ನೈಟ್'ರೈಡರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಬೆಂಗಳೂರು(ಫೆ.12): ಇಂದು ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ, ಕಲಾತ್ಮಕ ಬ್ಯಾಟ್ಸ್'ಮನ್ ಗುಂಡಪ್ಪ ವಿಶ್ವನಾಥ್ ಹಾಗೂ ದಾವಣಗೆರೆ ಎಕ್ಸ್'ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಭದ್ರಾವತಿ ಮೂಲದ ಗುಂಡಪ್ಪ ವಿಶ್ವನಾಥ್ 69ನೇ ವಸಂತಕ್ಕೆ ಕಾಲಿಟ್ಟರೆ, ದಾವಣಗೆರೆ ಎಕ್ಸ್'ಪ್ರೆಸ್ ಖ್ಯಾತಿಯ ಆರ್. ವಿನಯ್ ಕುಮಾರ್ 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1969ರಲ್ಲಿ ಕಾನ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ ಜಿ. ವಿಶ್ವನಾಥ್ ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ(137 ರನ್) ಸಿಡಿಸುವ ಮೂಲಕ ಗಮನ ಸೆಳೆದರು. 70ರ ದಶಕದ ಅದ್ಭುತ ಬ್ಯಾಟ್ಸ್'ಮನ್ ಆಗಿ ಬೆಳೆದ ವಿಶಿ, 91 ಟೆಸ್ಟ್ ಪಂದ್ಯಗಳಲ್ಲಿ 14 ಶತಕ ಹಾಗೂ 35 ಅರ್ಧಶತಕಗಳೊಂದಿಗೆ 6080 ರನ್ ಬಾರಿಸಿದ್ದರು. ಇನ್ನು 1983ರ ಏಕದಿನ ವಿಶ್ವಕಪ್ ವಿಜೇತ ತಂಡದಲ್ಲೂ ಗುಂಡಪ್ಪ ಸ್ಥಾನ ಪಡೆದಿದ್ದರು.
ಕ್ರಿಕೆಟ್'ನಿಂದ ನಿವೃತ್ತಿಯ ಬಳಿಕ 1996ರಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಗುಂಡಪ್ಪ, ಇಂಗ್ಲೆಂಡ್ ಪ್ರವಾಸಕ್ಕೆ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಅವರನ್ನು ಆಯ್ಕೆ ಮಾಡುವ ಮೂಲಕ ಟೀಂ ಇಂಡಿಯಾಗೆ ಎರಡು ವಜ್ರಗಳನ್ನು ನೀಡಿದರು ಎಂದರೆ ಅತಿಶಯೋಕ್ತಿಯಲ್ಲ. ಗುಂಡಪ್ಪ ವಿಶ್ವನಾಥ್ ನೂರ್ಕಾಲ ಬಾಳಿ ಎಂದು ಶುಭ ಹಾರೈಸುತ್ತಾ, ಹ್ಯಾಪಿ ಬರ್ತ್'ಡೇ ವಿಶಿ.....
ಪ್ರಸ್ತುತ ರಾಜ್ಯ ರಣಜಿ ತಂಡದ ನಾಯಕ ಆರ್. ವಿನಯ್ ಕುಮಾರ್ 34ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಸತತ ಎರಡು ಬಾರಿ ರಾಜಕ್ಕೆ ರಣಜಿ ಟ್ರೋಫಿ ಗೆದ್ದುಕೊಟ್ಟ ನಾಯಕ. ಮುಂಬರುವ ಐಪಿಎಲ್'ನಲ್ಲಿ ಕೊಲ್ಕತಾ ನೈಟ್'ರೈಡರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
2004-05ನೇ ಸಾಲಿನಲ್ಲಿ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ ವಿನಯ್, 2007-08ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಗರಿಷ್ಠ ವಿಕೆಟ್(40) ಪಡೆದ ಬೌಲರ್ ಎನಿಸಿಕೊಂಡರು. ಇನ್ನು 2010ರಲ್ಲಿ ಜಿಂಬಾಬ್ವೆ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್'ಗೂ ಕಾಲಿಟ್ಟರು. ಇನ್ನು ಐಪಿಎಲ್'ನಲ್ಲಿ ಆರ್'ಸಿಬಿ, ಕೊಚ್ಚಿ ಟಸ್ಕರ್ಸ್, ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.
