ಎಬಿಡಿಗಿಂದು 34ನೇ ಬರ್ತ್'ಡೇ ಸಂಭ್ರಮ: RCB ಶುಭ ಕೋರಿದ್ದು ಹೀಗೆ

First Published 17, Feb 2018, 4:58 PM IST
Happy Birthday AB de Villiers One of cricket most complete batsmen turns 34
Highlights

ಏಕದಿನ ಕ್ರಿಕೆಟ್'ನಲ್ಲಿ ಅತಿವೇಗದ ಅರ್ಧ ಶತಕ, ಶತಕ ಹಾಗೂ 150 ರನ್ ಸಿಡಿಸಿದ ಬ್ಯಾಟ್ಸ್'ಮನ್ ಎಂಬ ದಾಖಲೆ ಬರೆದಿರುವ ಎಬಿಡಿ, ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಅಬ್ರಹಾಂ ಬೆನ್ಜಮಿನ್ ಡಿ ವಿಲಿಯರ್ಸ್(ಎಬಿಡಿ) ಎಂಬ ಕ್ರಿಕೆಟ್ ಮಾಂತ್ರಿಕನಿಗಿಂದು 34ನೇ ಹುಟ್ಟುಹಬ್ಬಕ್ಕೆ ಕಾಲಿರಿಸಿದ್ದಾರೆ. ಆಧುನಿಕ ಕ್ರಿಕೆಟ್'ನ ಸೂಪರ್'ಸ್ಟಾರ್, ಮಿ.360, ಆಫ್ರಿಕಾ ತಂಡದ ಆಪತ್ಭಾಂದವ ಎಬಿ ಡಿವಿಲಿಯರ್ಸ್ ಆರ್'ಸಿಬಿ ತಂಡದ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು.

ಏಕದಿನ ಕ್ರಿಕೆಟ್'ನಲ್ಲಿ ಅತಿವೇಗದ ಅರ್ಧ ಶತಕ, ಶತಕ ಹಾಗೂ 150 ರನ್ ಸಿಡಿಸಿದ ಬ್ಯಾಟ್ಸ್'ಮನ್ ಎಂಬ ದಾಖಲೆ ಬರೆದಿರುವ ಎಬಿಡಿ, ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಕ್ರಿಕೆಟ್ ಜಗತ್ತಿನ ಮಿ. ಪರ್ಫೆಕ್ಟ್ ಎಂದೇ ಕರೆಸಿಕೊಳ್ಳುವ ಎಬಿಡಿ, 2015ರಂದು ಜೊಹಾನ್ಸ್'ಬರ್ಗ್'ನಲ್ಲಿ ವೆಸ್ಟ್ ಇಂಡಿಸ್ ವಿರುದ್ಧ ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆ ದೃಶ್ಯ ನಿಮ್ಮ ಮುಂದೆ..

ಆರ್'ಸಿಬಿ ಸೇರಿದಂತೆ ಕ್ರಿಕೆಟ್ ಜಗತ್ತು ಎಬಿಡಿಗೆ ಶುಭ ಕೋರಿದ್ದು ಹೀಗೆ...

loader