5ನೇ ಟೆಸ್ಟ್ ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ತಂಡ ಪ್ರಕಟಿಸಿದಾಗ ಹನುಮಾ ವಿಹಾರಿ ಸ್ಥಾನ ಪಡೆದಿದ್ದರು. ಹಲವು ಆಟಗಾರರು ಅವಕಾಶಕ್ಕಾಗಿ ಕಾಯುತ್ತಿರುವಾಗ ಅವರನ್ನೆಲ್ಲಾ ಮೀರಿಸಿ ತಂಡದಲ್ಲಿ ಸ್ಥಾನ ಪಡೆದ ಹನುಮಾ ವಿಹಾರಿ ಯಾರು? ಇಲ್ಲಿದೆ.
ಓವಲ್(ಸೆ.07): ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬದಲು ಯುವ ಬ್ಯಾಟ್ಸ್‌ಮನ್ ಹನುಮಾ ವಿಹಾರಿ ಸ್ಥಾನ ಪಡೆದಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಿಂದ ಟೆಸ್ಟ್ ಕ್ಯಾಪ್ ಪಡೆದ ಹನುಮಾ ವಿಹಾರಿ, ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಟೆಸ್ಟ್ ತಂಡಕ್ಕೆ ಡೆಬ್ಯೂ ಮಾಡಿದ ಭಾರತದ 292ನೇ ಆಟಗಾರ ಹನುಮಾ ವಿಹಾರಿ.
24 ವರ್ಷದ ಹನುಮಾ ವಿಹಾರಿ ಆಂಧ್ರ ಪ್ರದೇಶದ ಮೂಲದವರು. ಇತ್ತೀಚೆಗೆ ಮುಕ್ತಾಯವಾದ ಸೌತ್ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 148 ರನ್ ಸಿಡಿಸಿದ್ದರು. ಇಷ್ಟೇ ಅಲ್ಲ 63 ಪ್ರಥಮ ದರ್ಜೆ ಪಂದ್ಯಗಳಿಂದ 5142 ರನ್ ಸಿಡಿಸಿದ್ದಾರೆ. ಇಷ್ಟೇ ಅಲ್ಲ ಭರ್ಜರಿ ತ್ರಿಶತಕವನ್ನೂ ಸಿಡಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ 2013 ಹಾಗೂ 2015ರಲ್ಲಿ ಸನ್ ರೈಸರ್ಸ್ ಒಟ್ಟು 23 ಪಂದ್ಯದಿಂದ 280 ರನ್ ಸಿಡಿಸಿದ್ದಾರೆ. ಇದೀಗ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆಯಾಗೋ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ.
