ಇಂದಿನಿಂದ ಚಾಂಪಿಯನ್ಸ್ ಟ್ರೋಫಿ ಹಾಕಿ ಆರಂಭ
ಕಳೆದ 36 ಆವೃತ್ತಿಗಳಲ್ಲಿ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಭಾರತ, ಅಂತಿಮ ಆವೃತ್ತಿಯಲ್ಲಾದರೂ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ. ಆದರೆ ಅದು ಅಷ್ಟು ಸುಲಭವಲ್ಲ. ಕಾರಣ, ಟೂರ್ನಿಯಲ್ಲಿ ಭಾರತದ ಜತೆ ಹಾಲಿ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ, ವಿಶ್ವ ನಂ.1 ಆಸ್ಪ್ರೇಲಿಯಾ, ಬೆಲ್ಜಿಯಂ, ಆತಿಥೇಯ ನೆದರ್‌ಲೆಂಡ್ಸ್ ಹಾಗೂ ಪಾಕಿಸ್ತಾನ ತಂಡಗಳು ಕಣಕ್ಕಿಳಿಯಲಿವೆ.
ಬ್ರೆಡಾ(ನೆದರ್‌ಲೆಂಡ್ಸ್): ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹೀನಾಯ ಪ್ರದರ್ಶನ ತೋರಿ ನಿರಾಸೆ ಅನುಭವಿಸಿದ ಭಾರತ ಹಾಕಿ ತಂಡ, ಇಲ್ಲಿ ಆರಂಭಗೊಳ್ಳುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೊಸ ಆರಂಭಕ್ಕೆ ಕಾತರಿಸುತ್ತಿದೆ. ಚಾಂಪಿಯನ್ಸ್ ಟ್ರೋಫಿಯ ಕೊನೆ ಆವೃತ್ತಿ ಇದಾಗಿದ್ದು, ಭಾರತ ಉದ್ಘಾಟನಾ ಪಂದ್ಯದಲ್ಲಿ ಸಾಂಪ್ರದಾಯಿಕ ಪಾಕಿಸ್ತಾನವನ್ನು ಎದುರಿಸಲಿದೆ.
ಕಳೆದ 36 ಆವೃತ್ತಿಗಳಲ್ಲಿ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಭಾರತ, ಅಂತಿಮ ಆವೃತ್ತಿಯಲ್ಲಾದರೂ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ. ಆದರೆ ಅದು ಅಷ್ಟು ಸುಲಭವಲ್ಲ. ಕಾರಣ, ಟೂರ್ನಿಯಲ್ಲಿ ಭಾರತದ ಜತೆ ಹಾಲಿ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ, ವಿಶ್ವ ನಂ.1 ಆಸ್ಪ್ರೇಲಿಯಾ, ಬೆಲ್ಜಿಯಂ, ಆತಿಥೇಯ ನೆದರ್‌ಲೆಂಡ್ಸ್ ಹಾಗೂ ಪಾಕಿಸ್ತಾನ ತಂಡಗಳು ಕಣಕ್ಕಿಳಿಯಲಿವೆ.
ಪ್ರತಿ ತಂಡ ಉಳಿದ 5 ತಂಡಗಳ ವಿರುದ್ಧ ಒಮ್ಮೆ ಮುಖಾಮುಖಿಯಾಗಲಿದ್ದು, ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್ ಪ್ರವೇಶಿಸಲಿವೆ. 3 ಹಾಗೂ 4ನೇ ಸ್ಥಾನ ಪಡೆಯುವ ತಂಡಗಳು ಕಂಚಿನ ಪದಕಕ್ಕಾಗಿ ಸೆಣಸಲಿವೆ. ಜುಲೈ 1ರಂದು ಫೈನಲ್ ನಡೆಯಲಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಪ್ರಾಬಲ್ಯ ಮೆರೆದಿದ್ದು, ಉದ್ಘಾಟನಾ ಪಂದ್ಯ ಗೆದ್ದು ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.
ಭಾರತದ ವೇಳಾಪಟ್ಟಿ
ದಿನಾಂಕ ಎದುರಾಳಿ ಸಮಯ
ಜೂ.23 ಪಾಕಿಸ್ತಾನ ಸಂಜೆ 5.30ಕ್ಕೆ
ಜೂ.24 ಅರ್ಜೆಂಟೀನಾ ಮಧ್ಯಾಹ್ನ 3.30ಕ್ಕೆ
ಜೂ.27 ಆಸ್ಪ್ರೇಲಿಯಾ ಸಂಜೆ 6.30ಕ್ಕೆ
ಜೂ.28 ಬೆಲ್ಜಿಯಂ ರಾತ್ರಿ 8.30ಕ್ಕೆ
ಜೂ.30 ನೆದರ್‌ಲೆಂಡ್ಸ್ ಸಂಜೆ 7.30ಕ್ಕೆ