.ಜಪಾನ್, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿರುದ್ಧ  ಸತತ ಮೂರು ಪಂದ್ಯಗಳನ್ನು ಜಯಿಸಿದ್ದ ಭಾರತ ತಂಡಕ್ಕೆ ಎದುರಾಳಿ ಆಟಗಾರರು ಪ್ರಬಲ ಪೈಪೋಟಿ ನೀಡಿದರು.

ಢಾಕಾ(ಅ.18): ಇನ್ನೇನು ಪಂದ್ಯ ಸೋಲುತ್ತದೆ ಎಂದುಕೊಂಡಿದ್ದವರಿಗೆ ಕೊನೆಯ ನಿಮಿಷದಲ್ಲಿ ಸ್ಟ್ರೈಕರ್ ಗುರುಜಂತ್ ಸಿಂಗ್ ಗೋಲು ಹೊಡೆದ ಪರಿಣಾಮ ಭಾರತ ತಂಡ ದಕ್ಷಿಣ ಕೊರಿಯಾ ವಿರುದ್ಧ 1-1 ಗೋಲುಗಳ ಅಂತರದಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು.

ಢಾಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಹಾಕಿ ಟೂರ್ನಿಯ ದಕ್ಷಿಣ ಕೊರಿಯಾ ವಿರುದ್ಧದ ಸೂಪರ್ 4'ನ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.ಜಪಾನ್, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿರುದ್ಧ ಸತತ ಮೂರು ಪಂದ್ಯಗಳನ್ನು ಜಯಿಸಿದ್ದ ಭಾರತ ತಂಡಕ್ಕೆ ಎದುರಾಳಿ ಆಟಗಾರರು ಪ್ರಬಲ ಪೈಪೋಟಿ ನೀಡಿದರು. ದ್ವೀತೀಯ ಹಂತದವರೆಗೂ ಎರಡೂ ತಂಡಗಳು ಯಾವುದೇ ಗೋಲು ಗಳಿಸಿರಲಿಲ್ಲ.

ತೃತೀಯಾರ್ದದ 41ನೇ ನಿಮಿಷದಲ್ಲಿ ಎದುರಾಳಿ ತಂಡದ ಜುಂಗ್'ಜುನ್ ಗೋಲು ಹೊಡೆದ ಪರಿಣಾಮ ದಕ್ಷಿಣ ಕೊರಿಯಾ ತಂಡ 1-0 ಮುನ್ನಡೆ ಸಾಧಿಸಿದರು. ಆದರೆ ಭಾರತ ತಂಡದ ಆಟಗಾರರು ಎಷ್ಟೇ ಪ್ರಯತ್ನ ಪಟ್ಟರೂ ಕೊನೆಯ ಒಂದು ನಿಮಿಷದ ವರೆಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇನ್ನೇನು ಪಂದ್ಯ ಮುಗಿದು ಭಾರತ ಸೋಲೊಪ್ಪಿಕೊಳ್ಳಬೇಕು ಎನ್ನುವಷ್ಟರಲ್ಲಿ ಕಡೆಯ ಒಂದು ನಿಮಿಷದಲ್ಲಿ ಪೆನಾಲ್ಟಿ ಕಾರ್ನಾರ್ ಅವಕಾಶ ದೊರಕಿತು.

ಈ ಅವಕಾಶವನ್ನು ಬಳಸಿಕೊಂಡ ಗುರ್'ಜಂತ್ ಗೋಲು ಗಳಿಸುವಲ್ಲಿ ಸಫಲರಾದರು. ನಾಳೆ ಮಲೇಷ್ಯಾ ತಂಡದ ವಿರುದ್ಧ ಸೂಪರ್ 4 ಹಂತದ 2ನೇ ಪಂದ್ಯವನ್ನು ಎದುರಿಸಲಿದೆ.