ಏಕದಿನ ತಂಡದಲ್ಲಿ ಮಿಥಾಲಿ ರಾಜ್ ಸ್ಥಾನ ಪಡೆದರೆ, ಟಿ20 ತಂಡದಲ್ಲಿ ಹರ್ಮನ್‌'ಪ್ರೀತ್ ಕೌರ್ ಸ್ಥಾನ ಗಿಟ್ಟಿಸಿದ್ದಾರೆ. ಎಡಗೈ ಸ್ಪಿನ್ನರ್ ಏಕ್ತಾ ಬಿಶ್ತ್ ಎರಡೂ ತಂಡಗಳಲ್ಲಿ ಸ್ಥಾನ ಪಡೆದ ಏಕೈಕ ಆಟಗಾರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದುಬೈ(ಡಿ.22): ಐಸಿಸಿ ವರ್ಷದ ಮಹಿಳಾ ಏಕದಿನ ಹಾಗೂ ಟಿ20 ತಂಡಗಳನ್ನು ಪ್ರಕಟಿಸಿದ್ದು, ಭಾರತದ ಒಟ್ಟು ಮೂವರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.

ಏಕದಿನ ತಂಡದಲ್ಲಿ ಮಿಥಾಲಿ ರಾಜ್ ಸ್ಥಾನ ಪಡೆದರೆ, ಟಿ20 ತಂಡದಲ್ಲಿ ಹರ್ಮನ್‌'ಪ್ರೀತ್ ಕೌರ್ ಸ್ಥಾನ ಗಿಟ್ಟಿಸಿದ್ದಾರೆ. ಎಡಗೈ ಸ್ಪಿನ್ನರ್ ಏಕ್ತಾ ಬಿಶ್ತ್ ಎರಡೂ ತಂಡಗಳಲ್ಲಿ ಸ್ಥಾನ ಪಡೆದ ಏಕೈಕ ಆಟಗಾರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Scroll to load tweet…
Scroll to load tweet…

ಏಕದಿನ ತಂಡಕ್ಕೆ ಇಂಗ್ಲೆಂಡ್‌'ನ ಹೀಥರ್ ನೈಟ್ ನಾಯಕಿಯಾಗಿದ್ದರೆ, ಟಿ20 ತಂಡಕ್ಕೆ ವಿಂಡೀಸ್‌'ನ ಸ್ಟೆಫಾನಿ ಟೇಲರ್ ನಾಯಕಿಯಾಗಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್ ಎಲೈಸಿ ಫೆರ್ರಿ ವರ್ಷದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.