ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆಲ್ಲಿಸಿದರೆ,ಕೊಹ್ಲಿಯನ್ನು ಮುಖ್ಯ ಅತಿಥಿಯಾಗಿ ಕರೆಸುವುದಾಗಿ ಹೇಳಿ ನಕಲಿ ಕೊಹ್ಲಿಯನ್ನು ಕರೆಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮುಂಬೈ[ಮೇ.29]: ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆಲ್ಲಿಸಿದರೆ,ಕೊಹ್ಲಿಯನ್ನು ಮುಖ್ಯ ಅತಿಥಿಯಾಗಿ ಕರೆಸುವುದಾಗಿ ಹೇಳಿ ನಕಲಿ ಕೊಹ್ಲಿಯನ್ನು ಕರೆಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಸ್ಥಳೀಯ ರಾಜಕಾರಣಿ ವಿಠ್ಠಲ್ ಗಣಪತ್ ಎನ್ನುವವರು ಚುನಾವಣೆಯಲ್ಲಿ ತಮ್ಮ ಪರ ಮತ ಹಾಕಿ ಗೆಲ್ಲಿಸಿದರೆ ಕೊಹ್ಲಿಯನ್ನು ಕರೆಸುವುದಾಗಿ ಭಾರತೀಯ ನಾಯಕನ ಚಿತ್ರವುಳ್ಳ ಪೋಸ್ಟರ್‌ಗಳನ್ನು ಹಾಕಿಸಿದ್ದರು. ಬಳಿಕ ಕೊಹ್ಲಿಯನ್ನು ಹೋಲುವ ವ್ಯಕ್ತಿಯನ್ನು ಕರೆಸಿ ಊರಿನವರಿಗೆ ತೋರಿಸಿ ನಗೆಪಾಟಲಿಗೆ ಕಾರಣರಾಗಿದ್ದಾರೆ.
ಚುನಾವಣೆ ಪೋಸ್ಟರ್, ನಕಲಿ ಕೊಹ್ಲಿ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ.
