ನವದೆಹಲಿ[ಮಾ.28]: ಆಸ್ಪ್ರೇಲಿಯಾದ ಗ್ರಹಮ್‌ ರೀಡ್‌ ಭಾರತ ಪುರುಷರ ಹಾಕಿ ತಂಡದ ನೂತನ ಕೋಚ್‌ ಆಗಿ ನೇಮಕಗೊಳ್ಳುವುದು ಖಚಿತವಾಗಿದೆ. 2022ರ ವಿಶ್ವಕಪ್‌ ವರೆಗೂ ಅವರು ಹುದ್ದೆಯಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಅಜ್ಲಾನ್‌ ಶಾ ಹಾಕಿ: ಫೈನಲ್‌ಗೆ ಭಾರತ ಲಗ್ಗೆ!

3 ತಿಂಗಳುಗಳಿಂದ ಖಾಲಿ ಇದ್ದ ಹುದ್ದೆಗೆ ಆಸ್ಪ್ರೇಲಿಯಾದ ಮಾಜಿ ಆಟಗಾರನ ಹೆಸರನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಹಾಗೂ ಹಾಕಿ ಇಂಡಿಯಾ ಅಂತಿಮಗೊಳಿಸಿದೆ. ರೀಡ್‌ ಹೆಸರನ್ನು ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದು, ಈ ವಾರದ ಕೊನೆಯಲ್ಲಿ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎನ್ನಲಾಗಿದೆ. 

ರೀಡ್‌ ಆಸ್ಪ್ರೇಲಿಯಾ, ನೆದರ್‌ಲೆಂಡ್ಸ್‌ನಂತಹ ಅಗ್ರ ತಂಡಗಳಿಗೆ ಕೋಚ್‌ ಆಗಿದ್ದರು. ಕಳೆದ ವರ್ಷ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ಸೋಲುಂಡ ಬಳಿಕ ಹರೇಂದರ್‌ ಸಿಂಗ್‌ರನ್ನು ಕೋಚ್‌ ಸ್ಥಾನದಿಂದ ವಜಾಗೊಳಿಸಲಾಗಿತ್ತು.