ರಾಷ್ಟ್ರೀಯ ಕ್ರೀಡಾಪಟು ತನ್ನ ಕ್ರೀಡೆ ಹಾಗೂ ಕುಟುಂಬದ ನಿರ್ವಹಣೆಗಾಗಿ ಇದೀಗ ಭಿಕ್ಷಾಟನೆ ಇಳಿದಿದ್ದಾರೆ. ಪ್ಯಾರಾ ಅಥ್ಲೀಟ್ ಆಗಿರುವ ಮನ್‌ಮೋಹನ್ ಸಿಂಗ್ ಈ ಪರಿಸ್ಥಿತಿಗೆ ಕಾರಣ ಯಾರು? ಇಲ್ಲಿದೆ ವಿವರ.

ಬೋಪಾಲ್(ಸೆ.03): ಭಾರತದಲ್ಲಿ ಬಡತನದಲ್ಲಿರುವ ಕ್ರೀಡಾಪಟುಗಳು ಕತೆ ಶೋಚನೀಯ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಸಾಧನೆ ಮಾಡಿದರೂ ಅವರಿಗೆ ಸಿಗಬೇಕಾದ ಪ್ರೋತ್ಸಾಹ, ಬೆಂಬಲ ಮಾತ್ರ ಸಿಗುವುದೇ ಇಲ್ಲ. ಇದೀಗ ಮಧ್ಯಪ್ರದೇಶದ ಭೋಪಾಲ್ ನಗರದ ಪ್ಯಾರಾ ಅಥ್ಲೀಟ್ ಮನ್‌ಮೋಹನ್ ಸಿಂಗ್ ಲೋಧಿ ಇದಕ್ಕೆ ಮತ್ತೊಂದು ಸೇರ್ಪಡೆ.

ಪ್ಯಾರ ಅಥ್ಲೀಟ್ ಮನ್‌ಮೋಹನ್ ಸಿಂಗ್ ಲೋಧಿ 2017ರ ರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಕ್ರೀಡಾಕೂಟದ 100 ಮೀ ಓಟದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದರು. ಮನ್‌ಮೋಹನ್ ಸಾಧನೆ ಪರಗಿಣಿಸಿ, ಮಧ್ಯಪ್ರದೇಶ ಸರ್ಕಾರ ಉದ್ಯೋಗದ ಭರವಸೆ ನೀಡಿತ್ತು.

ಒಂದು ವರ್ಷ ಕಳೆದರೂ ಸರ್ಕಾರ ಭರವಸೆ ಈಡೇರಿಸಲಿಲ್ಲ. 4 ಬಾರಿ ಮಧ್ಯಪ್ರದೇಶ ಮುಖ್ಯಮಂತ್ರಿ ಭೇಟಿಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಕಡು ಬಡತನದಲ್ಲಿರುವ ಮನ್‌ಮೋಹನ್ ಸಿಂಗ್ ಲೋಧಿ ಭೋಪಾಲ್ ಬೀದಿಯಲ್ಲಿ ಭಿಕ್ಷಾಟನೆಗೆ ಇಳಿದಿದ್ದಾರೆ.

ಕುಟುಂಬದ ನಿರ್ವಹಣೆ ಹಾಗೂ ಕ್ರೀಡೆಯ ತರಬೇತಿಗಾಗಿ ಮನ್‌ಮೋಹನ್ ಸಿಂಗ್‌ಗೆ ಆರ್ಥಿಕ ನೆರವು ಬೇಕಿದೆ. ಆದರೆ ಸರ್ಕಾರ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ. ಹೀಗಾಗಿ ಭಿಕ್ಷಾಟನೆಗೆ ಇಳಿದಿದ್ದೇನೆ ಎಂದು ಮನ್‌ಮೋಹ್ ಸಿಂಗ್ ಲೋಧಿ ಹೇಳಿದ್ದಾರೆ.