ಜಮೈಕ(ಆ.20): ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರತಿ ದಿನ ಹೊಸ ಹೊಸ ಸ್ಟೈಲ್‌, ಹೊಸ ಹೊಸ ಸಂಭ್ರಮಾಚರಣೆಗಳು ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಿದೆ. ಅಫ್ಘಾನ್ ಸ್ಪಿನ್ನರ್ ಫ್ರಂಟ್ ಫ್ಲಿಪ್ ಸಂಭ್ರಮಾಚರಣೆ ಮಾಡಿ ಸುದ್ದಿಯಾದರೆ ಇದೀಗ ಗ್ಲೆನ್ ಫಿಲಿಪ್ಸ್ ಹೊಸ ಶಾಟ್ ಆವಿಷ್ಕರಿಸಿದ್ದಾರೆ.

 

 

ಜಮೈಕ ಹಾಗೂ ಗಯಾನ ನಡುವಿನ ಸಿಪಿಎಲ್ ಟೂರ್ನಿಯ 11ನೇ ಲೀಗ್ ಪಂದ್ಯಲ್ಲಿ ಗ್ಲೆನ್ ಫಿಲಿಪ್ಸ್ ಹೊಸ ಶೈಲಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಜಮೈಕ ತಲ್ವಾಸ್ ತಂಡ ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಪ್ಸ್  ಸ್ಕೂಪ್ ಶಾಟ್ ಹೊಡೆಯಲು ಹೋಗಿ ಕೊನೆಗೆ ಹೊಸ ಶಾಟ್ ಆವಿಷ್ಕರಿಸಿದ್ದಾರೆ.

ನ್ಯೂಜಿಲೆಂಡ್ ಮೂಲದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಗ್ಲೆನ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಗಯಾನ ತಂಡದ ವೇಗಿ ರಾಯದ್ ಎಮ್ರಿಟ್ ಎಸೆತದಲ್ಲಿ ಸ್ಕೂಪ್ ಶಾಟ್ ಮೂಲಕ ಬೌಂಡರಿ ಬಾರಿಸಿದರು. ಗ್ಲೆನ್ ಶಾಟ್‌ಗೆ ಕ್ರಿಕೆಟ್ ಲೋಕವೇ ಅಚ್ಚರಿ ವ್ಯಕ್ತಪಡಿಸಿದೆ.