ಬರಸಿಡಿಲ ಬ್ಯಾಟಿಂಗ್ ಹಾಗೂ ಉತ್ಕೃಷ್ಟ ಬ್ಯಾಟಿಂಗ್'ಗೆ ಹೆಸರಾಗಿರುವ ಮ್ಯಾಕ್ಸ್'ವೆಲ್ ತಮ್ಮ ನೂತನ ಜವಾಬ್ದಾರಿಯಲ್ಲಿ ಮಿಂಚಬಹುದೆಂಬ ಅಂದಾಜು ಪಂಜಾಬ್ ಟೀಮ್ ಮ್ಯಾನೇಮ್ಮೆಂಟ್'ನದ್ದು.
ಬೆಂಗಳೂರು(ಮಾ. 10): ಆಸ್ಟ್ರೇಲಿಯಾದ ಆಲ್'ರೌಂಡರ್ ಗ್ಲೆನ್ ಮ್ಯಾಕ್ಸ್'ವೆಲ್ ಅವರು ಈ ಬಾರಿಯ ಐಪಿಎಲ್ ಸೀಸನ್'ನಲ್ಲಿ ಪಂಜಾಬ್ ಕಿಂಗ್ಸ್ ಇಲವೆನ್ ತಂಡವನ್ನು ಮುನ್ನಡೆಸಲಿದ್ದಾರೆ. ಇದರೊಂದಿಗೆ ಮುರಳಿ ವಿಜಯ್ ಅವರು ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದಾರೆ. ಕಳೆದ ಸೀಸನ್'ನಲ್ಲಿ ತಳಕ್ಕೆ ಕುಸಿದಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಚೇತರಿಕೆ ನೀಡುವ ಸಲುವಾಗಿ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದೆ.
ಅಚ್ಚರಿ ನಿರ್ಧಾರ:
ಮ್ಯಾಕ್ಸ್'ವೆಲ್'ಗೆ ಕ್ಯಾಪ್ಟನ್ಸಿ ಕೊಟ್ಟಿರುವುದು ಕ್ರಿಕೆಟ್ ಆಸಕ್ತರಲ್ಲಿ ಅಚ್ಚರಿ ಮೂಡಿಸಿದೆ. ಮ್ಯಾಕ್ಸ್'ವೆಲ್ ಅವರು ಇತ್ತೀಚಿನ ದಿನಗಳಲ್ಲಿ ಔಟ್ ಆಫ್ ಫಾರ್ಮ್'ನಲ್ಲಿದ್ದಾರೆ. ರನ್ ಗಳಿಸಲು ಸಾಕಷ್ಟು ಪರದಾಡುತ್ತಿದ್ದಾರೆ. ಈವರೆಗೆ ಒಮ್ಮೆಯೂ ಅವರು ಕ್ಯಾಪ್ಟನ್ಸಿ ಜವಾಬ್ದಾರಿ ನಿಭಾಯಿಸಿದ ಅನುಭವ ಹೊಂದಿಲ್ಲ. ಹಶೀಮ್ ಆಮ್ಲಾ, ಮಾರ್ಟಿನ್ ಗುಪ್ಟಿಲ್, ತಂಡದಲ್ಲಿ ಶಾನ್ ಮಾರ್ಷ್, ಡೇವಿಡ್ ಮಿಲ್ಲರ್, ಇಯಾನ್ ಮಾರ್ಗನ್, ಡರೆನ್ ಸ್ಯಾಮಿಯಂತಹವರಿದ್ದರೂ ಮ್ಯಾಕ್ಸ್'ವೆಲ್'ಗೆ ಮಣೆ ಹಾಕಲಾಗಿದೆ. ಆದರೆ, ಬರಸಿಡಿಲ ಬ್ಯಾಟಿಂಗ್ ಹಾಗೂ ಉತ್ಕೃಷ್ಟ ಬ್ಯಾಟಿಂಗ್'ಗೆ ಹೆಸರಾಗಿರುವ ಮ್ಯಾಕ್ಸ್'ವೆಲ್ ತಮ್ಮ ನೂತನ ಜವಾಬ್ದಾರಿಯಲ್ಲಿ ಮಿಂಚಬಹುದೆಂಬ ಅಂದಾಜು ಪಂಜಾಬ್ ಟೀಮ್ ಮ್ಯಾನೇಮ್ಮೆಂಟ್'ನದ್ದು.
