ಖ್ಯಾತ ಅಂತಾರಾಷ್ಟ್ರೀಯ ಕುಸ್ತಿ ಪಟು ಗೀತಾ ಪೋಗಟ್ ಅವರನ್ನು ಹರ್ಯಾಣ ರಾಜ್ಯದ ಪೊಲೀಸ್ ಉಪ ವರಿಷ್ಠಾಕಾರಿ ಹುದ್ದೆಯನ್ನು ನೀಡಲು ಆ ರಾಜ್ಯ ಸರ್ಕಾರ ನಿರ್ಧರಿಸಿದೆ.
ಚಂಡೀಗಢ(ಅ.20): ಖ್ಯಾತ ಅಂತಾರಾಷ್ಟ್ರೀಯ ಕುಸ್ತಿ ಪಟು ಗೀತಾ ಪೋಗಟ್ ಅವರನ್ನು ಹರ್ಯಾಣ ರಾಜ್ಯದ ಪೊಲೀಸ್ ಉಪ ವರಿಷ್ಠಾಕಾರಿ ಹುದ್ದೆಯನ್ನು ನೀಡಲು ಆ ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯ ಗೃಹ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಈ ಮನವಿಯ ಬಗ್ಗೆ ಚರ್ಚಿಸಲು ಇಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಗೀತಾ ಅವರಿಗೆ ಈ ಮಹತ್ವದ ಹುದ್ದೆಯನ್ನು ನೀಡಲು ನಿರ್ಧರಿಸಲಾಯಿತು.
ಗೀತಾ ಪೋಗಟ್ ದೆಹಲಿಯಲ್ಲಿ ನಡೆದ 19 ನೇ ಕಾಮನ್'ವೆಲ್ತ್ ಗೇಮ್ಸ್'ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಇದೇ ಸಭೆಯಲ್ಲಿ, ಪರ್ವತಾರೋಹಿ ರಾಮ್ ಲಾಲ್ ಅವರಿಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಯನ್ನು ನೀಡಲು ನಿರ್ಧರಿಸಲಾಗಿದೆ.
