ಮುಂದಿನ ಆವೃತ್ತಿ ಯಲ್ಲಿ ಎಲ್ಲಾ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು ಎಷ್ಟುಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ತಂಡಗಳಿಗೆ ಸಿಗಲಿದೆ ಅನ್ನುವುದರ ಕುರಿತು ಐಪಿಎಲ್‌ ಆಡಳಿತ ಮಂಡಳಿ ಇನ್ನೂ ಮಾಹಿತಿ ನೀಡಿಲ್ಲ.
ಬೆಂಗಳೂರು(ಮೇ.08): ಪ್ರಚಂಡ ಬ್ಯಾಟಿಂಗ್ ಮೂಲಕ ಬೆಂಗಳೂರು ಅಭಿಮಾನಿಗಳ ಮನಗೆದ್ದಿರುವ ಕ್ರಿಸ್ ಗೇಲ್, ಆರ್ಸಿಬಿ ಪರ ಚಿನ್ನಸ್ವಾಮಿ ಮೈದಾನದಲ್ಲಿ ಭಾನುವಾರ ಬಹುತೇಕ ಕೊನೆ ಪಂದ್ಯವಾಡಿದ್ದಾರೆ. ಈ ಆವೃತ್ತಿಯಲ್ಲಿ ತವರಿನಲ್ಲಿ ಆರ್ಸಿಬಿಗೆ ಇದು ಕೊನೆ ಪಂದ್ಯವಾಗಿತ್ತು. ಮುಂದಿನ ಆವೃತ್ತಿ ಯಲ್ಲಿ ಎಲ್ಲಾ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು ಎಷ್ಟುಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ತಂಡಗಳಿಗೆ ಸಿಗಲಿದೆ ಅನ್ನುವುದರ ಕುರಿತು ಐಪಿಎಲ್ ಆಡಳಿತ ಮಂಡಳಿ ಇನ್ನೂ ಮಾಹಿತಿ ನೀಡಿಲ್ಲ. ಮೂಲಗಳ ಪ್ರಕಾರ ಇಬ್ಬರು ಆಟಗಾರರನ್ನಷ್ಟೇ ಉಳಿಸಿಕೊಳ್ಳಬಹು ದಾಗಿದ್ದು, ಒಂದೊಮ್ಮೆ ಹಾಗಾದಲ್ಲಿ ಆರ್ಸಿಬಿ ಗೇಲ್ ಅವರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ. ಲಯ ಕಳೆದು ಕೊಂಡು ರನ್ ಗಳಿಸಲು ಪರದಾಡುತ್ತಿರುವ ಗೇಲ್ ಅಭಿಮಾನಿಗಳಲ್ಲಿ ಭಾರೀ ನಿರಾಸೆ ಮೂಡಿಸಿದ್ದಾರೆ.
