ದೆಹಲಿ(ಜು.16): ಟೀಂ ಇಂಡಿಯಾದಲ್ಲಿ ಹೊಸ ಸ್ಟೈಲ್ ಟ್ರೆಂಡ್ ಶುರುಮಾಡಿದ ಕೀರ್ತಿ ಎಂ ಎಸ್ ಧೋನಿಗೆ ಸಲ್ಲಲಿದೆ. ಆರಂಭದಲ್ಲಿ ಉದ್ದ ಕೂದಲಿನ ಮೂಲಕ ತಂಡಕ್ಕೆ ಎಂಟ್ರಿಕೊಟ್ಟಿದ್ದ ಎಂ ಎಸ್ ಧೋನಿ ಬಳಿಕ ಶಾರ್ಟ್, ಸ್ಪೈಕ್, ಮೊಹವಾಕ್, ಟ್ರಿಮ್, ಬಾಲ್ಡ್ ಸೇರಿದಂತೆ ಹಲವು  ಶೈಲಿಗಳಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ.

ಪ್ರತಿ ಸರಣಿಗೆ ಒಂದಲ್ಲಾ ಒಂದು ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಎಂ ಎಸ್ ಧೋನಿ, ಇದೀಗ ಇಂಗ್ಲೆಂಡ್ ಪ್ರವಾಸದಲ್ಲಿ ನ್ಯಾಚುರಲ್ ಸ್ಟೈಲ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಧೋನಿ ಬಿಳಿ ಗಡ್ಡಕ್ಕೆ ಅಭಿಮಾನಿಗಳು ಸಾಕಷ್ಟು ಸಲಹೆಗಳನ್ನ ನೀಡಿದ್ದಾರೆ. ಇದೀಗ ಟೀಂ ಇಂಡಿಯಾ ಡ್ಯಾಶಿಂಗ್ ಓಪನರ್ ಗೌತಮ್ ಗಂಭೀರ್ ಧೋನಿ ಬಿಳಿ ಗಡ್ಡ ವಿಶೇಷ ಸಲಹೆ ನೀಡಿದ್ದಾರೆ.

ಬಿಳಿಗಡ್ಡದಿಂದ ಧೋನಿ ಹೆಚ್ಚು ವಯಸ್ಸಾದಂತೆ ಕಾಣಿಸುತ್ತಿದ್ದಾರೆ. ಧೋನಿ ಫಿಟ್ ಆಗಿದ್ದಾರೆ. ಹೀಗಾಗಿ ಮೈದಾನದಲ್ಲಿ ಧೋನಿ ಅಷ್ಟೇ ಆಕ್ಟೀವ್ ಆಗಿದ್ದಾರೆ. ತುಂಬಾ ಕ್ವಿಕ್ ಆಗಿರೋ ಧೋನಿ ಬಿಳಿ ಗಡ್ಡದಿಂದ  5 ರಿಂದ 10 ವರ್ಷ ಹೆಚ್ಚು ವಯಸ್ಸಾದಂತೆ ಕಾಣಿಸುತ್ತಿದ್ದಾರೆ. ಹೀಗಾಗಿ ಧೋನಿ ಶೀಘ್ರದಲ್ಲೇ ಬಿಳಿ ಗಡ್ಡಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಗಂಭೀರ್ ಖಾಸಗಿ ಸ್ಪೋರ್ಟ್ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.