ನವದೆಹಲಿ(ಸೆ.18): ಟೀಮ್ ಇಂಡಿಯಾದ ಓಪನರ್ ಗೌತಮ್ ಗಂಭೀರ್ ಮತ್ತು ನಾಯಕ ಧೋನಿ ಕ್ಯಾಪ್ಟನ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದು ಮತ್ತೆ ಮುಂದುವರೆದಿದ್ದು, ಗಂಭೀರ್, ಕೂಲ್ ಕ್ಯಾಪ್ಟನ್ ಧೋನಿಗೆ ಟಾಂಗ್ ಕೊಟ್ಟಿದ್ದಾರೆ. 

ಕ್ರಿಕೆಟ್​ ಆಟಗಾರರ ಬಯೋಪಿಕ್​ಗಿಂತ ದೇಶಕ್ಕಾಗಿ ಕ್ರಿಕೆಟರ್​ಗಳಿಗಿಂತ ಹೆಚ್ಚು ಕೊಡುಗೆ ನೀಡಿದ ಸಾಧಕರ ಚಿತ್ರ ಮಾಡುವುದು ಒಳ್ಳೆಯದೆಂದು ಟೀಮ್ ಇಂಡಿಯಾದ ಆಟಗಾರ ಗೌತಮ್​ ಗಂಭೀರ್​ ಹೇಳಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ ಜೀವನಾಧರಿತ ಕತೆ ಚಿತ್ರವಾಗಿ ಬರುತ್ತಿರುವ ಹಿನ್ನಲೆ ಪ್ರತಿಕ್ರಿಯಿಸಿರುವ ಗಂಭೀರ್​, ಕ್ರಿಕೆಟರ್​ಗಳಿಗಿಂತ ದೇಶಕ್ಕಾಗಿ ಹೆಚ್ಚು ಸೇವೆ ಮಾಡಿರುವ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಶ್ರಮಿಸುತ್ತಿರುವವರ ಕುರಿತು ಚಿತ್ರ ಮಾಡುವುದು ಒಳ್ಳೆಯದೆಂಬ ಅಭಿಪ್ರಾಯ ಹೊರ ಹಾಕಿದ್ದಾರೆ. ಈ ಮೂಲಕ ಮತ್ತೆ ಧೋನಿ ವಿರುದ್ಧದ ಟಾಂಗ್ ಮಾಡಿದ್ದಾರೆ.