ಅಫ್ರಿದಿ ಕಾಶ್ಮೀರಿ ನೋಬಾಲ್'ಗೆ ಸಿಕ್ಸ್'ರ್'ನಲ್ಲಿ ಗಂಭೀರ್ ಉತ್ತರ

Gautam Gambhir slams Shahid Afridis Kashmir tweet
Highlights

ಇಂದು ಕಾಶ್ಮೀರದ ಬಗ್ಗೆ ಅಫ್ರಿದಿ ಹೇಳಿಕೆಗೆ ಭಾರತದ ಸ್ಫೋಟಕ ಆಟಗಾರ ಗೌತಮ್ ಗಂಭೀರ್ ಸಿಕ್ಸ್'ರ್ ಶೈಲಿಯಲ್ಲಿಯೇ ಉತ್ತರ ನೀಡಿದ್ದಾರೆ.

ನವದೆಹಲಿ(ಏ.03): ಪಾಕ್ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಆಗಿದ್ದಾಂಗೆ ವಿವಾದಾತ್ಮಕ ಹೇಳಿಕೆ ನೀಡಿ  ಪ್ರಚಾರದ ತಂತ್ರ ಅನುಸರಿಸುವುದು ಸಾಮಾನ್ಯ ಸಂಗತಿಯಾಗಿದೆ.

ಇಂದು ಕಾಶ್ಮೀರದ ಬಗ್ಗೆ ಅಫ್ರಿದಿ ಹೇಳಿಕೆಗೆ ಭಾರತದ ಸ್ಫೋಟಕ ಆಟಗಾರ ಗೌತಮ್ ಗಂಭೀರ್ ಸಿಕ್ಸ್'ರ್ ಶೈಲಿಯಲ್ಲಿಯೇ ಉತ್ತರ ನೀಡಿದ್ದಾರೆ.

ಕಾಶ್ಮೀರ ವಿವಾದದ ಬಗ್ಗೆ ಟ್ವೀಟ್ ಮಾಡಿದ್ದ ಅಫ್ರಿದಿ ' ಭಾರತ ಆಕ್ರಮಿತ ಕಾಶ್ಮಿರದಲ್ಲಿ ನೋಡಲಾಗದ ಹಾಗೂ ಕಾಡುವ ಪರಿಸ್ಥಿತಿ ಜರುಗುತ್ತಿವೆ. ಅಮಾಯಕರು ಸ್ವಾತಂತ್ರ ಹಾಗೂ ಆತ್ಮಾಭಿಮಾನಕ್ಕಾಗಿ ದಬ್ಬಳಾಕೆಯ ಆಡಳಿತದಿಂದ ಮೃತರಾಗುತ್ತಿದ್ದಾರೆ. ವಿಶ್ವಸಂಸ್ಥೆ ಹಾಗೂ ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಈ ರಕ್ತಪಾತವನ್ನು ತಡೆಯಲು ಏಕೆ ಯತ್ನಿಸುತ್ತಿಲ್ಲ' ಎಂದು ಆರೋಪಿಸಿದ್ದರು.

ಇದಕ್ಕೆ ಸಿಕ್ಸ್'ರ್ ಶೈಲಿಯಲ್ಲಿ ಟ್ವೀಟ್ ಮೂಲಕ ಉತ್ತರ ನೀಡಿರುವ ಭಾರತದ ಸ್ಫೋಟಕ ಆಟಗಾರ ಗೌತಮ್ ಗಂಭೀರ್ 'ಮಾಧ್ಯಮದವರು ಅಫ್ರಿದಿಯ ನಮ್ಮ ಕಾಶ್ಮೀರ ಹಾಗೂ ವಿಶ್ವಸಂಸ್ಥೆಯ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನನ್ನನ್ನು ಸಂಪರ್ಕಿಸಿದ್ದರು. ಈ ಬಗ್ಗೆ ಹೇಳಲು ವಿಶೇಷವೇನಿದೆ ? ಅಫ್ರಿದಿಯವರು ಕೇವಲ ವಿಶ್ವಸಂಸ್ಥೆಯ ಬಗ್ಗೆ ಹುಡುಕುತ್ತಿದ್ದಾರೆ. ಇದು ಅವರ ಹಿಂದುಳಿದ ನಿಘಂಟಿನಲ್ಲಿ ತನ್ನ ವಯಸ್ಸಿನ ಬ್ರಾಕೆಟ್'ನಲ್ಲಿ "ಅಂಡರ್ ನೈಂಟೀನ್" ಎಂಬ ಅರ್ಥವನ್ನು ನೀಡುತ್ತದೆ. ಅವರು ನೋಬಾಲ್'ನಲ್ಲಿ ವಿಕೇಟ್ ಪಡೆಯುತ್ತಾರೆ ಎಂಬುದನ್ನು ಮಾಧ್ಯಮದವರು ಪರಿಗಣಿಸಬೇಕು' ಎಂದು ಉತ್ತರ ನೀಡಿದ್ದಾರೆ.

loader