ಇದೊಂದು ಬದಲಾವಣೆಯನ್ನು ಹೊರತುಪಡಿಸಿದರೆ, ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಿದ್ದವರನ್ನೇ ಉಳಿಸಿಕೊಳ್ಳಲಾಗಿದೆ.
ನವದೆಹಲಿ(ನ.22): ಪ್ರಸಕ್ತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಆರಂಭಿಕ ಗೌತಮ್ ಗಂಭೀರ್ ಅವರನ್ನು ಕೈಬಿಟ್ಟಿರುವ ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿ ವೇಗಿ ಭುವನೇಶ್ವರ್ ಕುಮಾರ್'ಗೆ ತಂಡದ ಹದಿನಾರನೇ ಆಟಗಾರನಾಗಿ ಕರೆಕೊಟ್ಟಿದೆ.
ಇದೊಂದು ಬದಲಾವಣೆಯನ್ನು ಹೊರತುಪಡಿಸಿದರೆ, ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಿದ್ದವರನ್ನೇ ಉಳಿಸಿಕೊಳ್ಳಲಾಗಿದೆ. ವಿಶಾಖಪಟ್ಟಣದಲ್ಲಿ ಸೋಮವಾರವಷ್ಟೇ ಮುಕ್ತಾಯ ಕಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ 246 ರನ್ ಗಳಿಸಿರುವ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಐದು ಟೆಸ್ಟ್ ಪಂದ್ಯ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಶನಿವಾರ (ನ.26)ದಿಂದ ಮೂರನೇ ಟೆಸ್ಟ್ ಶುರುವಾಗಲಿದೆ.
