ಇದೀಗ ಎರಡನೇ ಮಗುವಿಗೆ ಅನೈಜಾ ಎಂದು ಹೆಸರಿಟ್ಟಿರುವುದಾಗಿ ಗಂಭೀರ್ ಟ್ವೀಟ್ ಮಾಡಿದ್ದಾರೆ.
ನವದೆಹಲಿ(ಜು.13): ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗ, ಕೋಲ್ಕತಾ ನೈಟ್'ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಇತ್ತೀಚೆಗಷ್ಟೇ ಎರಡನೇ ಮಗುವಿಗೆ ತಂದೆಯಾಗಿದ್ದಾರೆ.
ಕಳೆದ ತಿಂಗಳಷ್ಟೇ ಗೌತಮ್ ಪತ್ನಿ ನತಾಶ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಆ ಸಂದರ್ಭದಲ್ಲಿ ಗಂಭೀರ್ ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಹಾಗೂ ಇನ್'ಸ್ಟಾಗ್ರಾಂನಲ್ಲಿ ಮೊದಲ ಮಗಳಾದ ಆಜೀನ್'ಳೊಂದಿಗಿರುವ ಎರಡನೇ ಮಗುವಿರುವ ಬಾವಚಿತ್ರವನ್ನು ಪೋಸ್ಟ್ ಮಾಡಿದ್ದರು.
ಇದೀಗ ಎರಡನೇ ಮಗುವಿಗೆ ಅನೈಜಾ ಎಂದು ಹೆಸರಿಟ್ಟಿರುವುದಾಗಿ ಗಂಭೀರ್ ಟ್ವೀಟ್ ಮಾಡಿದ್ದಾರೆ.
ಗೌತಮ್ ಇಟ್ಟ ಹೆಸರಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
