ಫ್ರೆಡ್’ಮನ್ ವಿವಾದಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಕ್ರಿಕೆಟಿಗರು ಈಡನ್ ಗಾರ್ಡನ್ ಮೈದಾನ ಸ್ವಚ್ಚ ಮಾಡುತ್ತಿರುವ ಚಿತ್ರ ಹಾಕಿ ವ್ಯಂಗ್ಯವಾಡಿದ್ದರು.
ನವದೆಹಲಿ[ಮೇ.01]: ಭಾರತ-ಪಾಕಿಸ್ತಾನ ನಡುವಿನ ಸಂಬಂಧದ ಕುರಿತು ಗೌತಮ್ ಗಂಭೀರ್ ಮಾಡಿದ ಟ್ವೀಟ್ ಕಂಡು, ಆಸ್ಟ್ರೇಲಿಯಾ ಪತ್ರಕರ್ತ ಡೆನ್ನಿಸ್ ಫ್ರೆಡ್'ಮನ್ ಭಾರತೀಯ ಕ್ರಿಕೆಟಿಗನನ್ನು ಮೌಖಿಕ ಭಯೋತ್ಪಾದಕ ಎಂದು ಕರೆದಿದ್ದಾರೆ.
‘ಪಾಕಿಸ್ತಾನಿ ಕ್ರಿಕೆಟಿಗರಿಗೆ ಮಾತ್ರ ನಿಷೇಧ ಹೇರಿದರೆ ಸಾಲದು, ಸಿನಿಮಾ, ಸಂಗೀತ ಸೇರಿ ಪ್ರತಿ ಕ್ಷೇತ್ರದಲ್ಲೂ ನಿಷೇಧ ಹೇರಬೇಕು’ ಎಂದು ಗಂಭೀರ್ ಹೇಳಿದ್ದರು. ಫ್ರೆಡ್’ಮನ್ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದು, ಗಂಭೀರ್ ಬಳಿ ಕ್ಷಮೆ ಕೇಳುವಂತೆ ಅಭಿಮಾನಿಗಳು ಆಗ್ರಹಿಸಿದ್ದಾರೆ.
ಫ್ರೆಡ್’ಮನ್ ವಿವಾದಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಕ್ರಿಕೆಟಿಗರು ಈಡನ್ ಗಾರ್ಡನ್ ಮೈದಾನ ಸ್ವಚ್ಚ ಮಾಡುತ್ತಿರುವ ಚಿತ್ರ ಹಾಕಿ ವ್ಯಂಗ್ಯವಾಡಿದ್ದರು. ಜತೆಗೆ ಸಚಿನ್ ಯಾರು ಎಂಬ ಬರಹವಿರುವ ಶರ್ಟ್ ಹಾಕಿಕೊಂಡು ವಿವಾದ ಮೈಮೇಲೆಳೆದುಕೊಂಡಿದ್ದರು.
