'ಸ್ವರ್ಗಕ್ಕೆ ದಾರಿ': ಇಲ್ಲಿದೆ ನೋಡಿ ಕಾಮ ನದಿಯ ವಿಸ್ಮಯ ನೋಟ..! ವಿಡಿಯೋ ವೈರಲ್
ಸಮುದ್ರದ ಮೇಲೆ ಕಾಮಾ ನದಿಯ ದೃಶ್ಯಕಾವ್ಯ
ರಷ್ಯಾದ ಪೆರ್ಮ್ ಪ್ರದೇಶದಲ್ಲಿರುವ ಕಾಮಾ ನದಿ
ಸ್ವರ್ಗದಿಂದ ಧರೆಗಿಳಿದಂತೆ ಕಂಡು ಬಂದ ನದಿ
ಬೆಂಗಳೂರು(ಜು.21): ಪ್ರಕೃತಿಯು ತನ್ನ ವಿಸ್ಮಯಗಳಿಂದ ನಮ್ಮನ್ನು ಯಾವಾಗಲೂ ಅಚ್ಚರಿಗೊಳಿಸುತ್ತಲೇ ಬಂದಿದೆ. ಇದೀಗ ನದಿಯ ವಿಡಿಯೋವೊಂದು ಇಡೀ ಜಗತ್ತನ್ನೇ ಒಂದು ಕ್ಷಣ ವಿಸ್ಮಯಗೊಳ್ಳುವಂತೆ ಮಾಡಿದೆ. ಅಷ್ಟೇ ಅಲ್ಲ ನೈಸರ್ಗಿಕ ಪ್ರಪಂಚದ ಮತ್ತೊಂದು ಅಚ್ಚರಿ ನಮ್ಮ ಮುಂದೆ ಬಂದಿದೆ. ಇದೀಗ Zlatti71 ಎನ್ನುವ ಟ್ವಿಟರ್ ಬಳಕೆದಾರರು ಒಂದು ಶಾರ್ಟ್ ಕ್ಲಿಕ್ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋ ಕ್ಲಿಪ್, ರಷ್ಯಾದ ಪೆರ್ಮ್ ಪ್ರದೇಶದಲ್ಲಿನ ಕಾಮಾ ನದಿಯ ಮೇಲ್ಮೈನಲ್ಲಿ ಹೊಳೆಯುವ ಚಿನ್ನದ ಜಲಧಾರೆಯು ಕಂಡು ಬಂದಿದೆ. ಈ ದೃಶ್ಯವನ್ನು ಹತ್ತಿರದ ದೋಣಿಗಳಲ್ಲಿ ನೋಡುಗರಿಗೆ ಅದ್ಭುತ ದೃಶ್ಯಕಾವ್ಯವನ್ನು ಸೆರೆ ಹಿಡಿಯಲು ಅವಕಾಶ ಮಾಡಿಕೊಟ್ಟಿದೆ. ಜುಲೈ 13, 2023 ರಂದು ಸೆರೆಹಿಡಿಯಲಾದ ಈ ವಿಡಿಯೊದಲ್ಲಿ ಎತ್ತರದ ಗೋಲ್ಡನ್ ವಾಟರ್‌ಸ್ಪೌಟ್ ಗೋಚರಿಸುತ್ತದೆ, ಇದು ನದಿಯ ಮೇಲ್ಮೈಯಿಂದ ಆಕಾಶವನ್ನು ತಲುಪಿದ್ದು, ಇದು ನಿಜವಾಗಿಯೂ ಅಧ್ಬುತ ದೃಶ್ಯವಾಗಿದೆ. ಸ್ವಭಾವ ಮತ್ತು ಮನಸ್ಥಿತಿಯ ನಡುವಿನ ವ್ಯತ್ಯಾಸದ ಬಗ್ಗೆ. ಕಾಮಾ ನದಿ, ಪೆರ್ಮ್ ಪ್ರದೇಶ, ಜುಲೈ 13, 2023 ಎಂದು ಟ್ವೀಟ್ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ.
ಅಚ್ಚರಿಗೊಳಗಾದ ನೆಟ್ಟಿಗರು:
ಇಂಟರ್‌ನೆಟ್‌ನಲ್ಲಿ ಈ ವಿಡಿಯೋ ನೋಡಿದ ಮಂದಿ ಒಂದು ಕ್ಷಣ ಅಚ್ಚರಿಗೊಳಗಾಗಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದಷ್ಟೇ ಅಲ್ಲದೇ ಸಾವಿರಾರು ಮಂದಿ ವಿಡಿಯೋಗೆ ಲೈಕ್ ಒತ್ತಿದ್ದಾರೆ. ಈ ಪೈಕಿ ಓರ್ವ ನೆಟ್ಟಿಗ, ಈ ವಿಡಿಯೋ ಕೂಲ್ ಆಗಿದೆ, ಆದರೆ ಏನಿದು ಎಂದು ಪ್ರಶ್ನಿಸಿದ್ದಾನೆ. ಮತ್ತೋರ್ವ ನೆಟ್ಟಿಗ ಇದು ಸುಂದರವಾಗಿದೆ ಎಂದು ಕಾಮೆಂಟ್ ಮಾಡಿದ್ದಾನೆ.
ಲೈಂಗಿಕ ಕಿರುಕುಳ ಕೇಸ್:ಬ್ರಿಜ್‌ಭೂಷಣ್ ಸಿಂಗ್‌ಗೆ ಜಾಮೀನು..!
ವಾಟರ್‌ಸ್ಪೌಟ್ ಅಂದ್ರೇನು?:
ವಾಟರ್‌ಸ್ಪೌಟ್ ಎಂದರೆ ಅದು ಒಂದು ರೀತಿಯ ಸುಂಟರಗಾಳಿಯಾಗಿದೆ. ಇದು ಕಾಲಮ್ ಅಥವಾ ಸೈಕ್ಲೋನ್‌ನಂತೆ ಗಾಳಿಯಲ್ಲಿ ತಿರುಗುತ್ತಿರುವಾಗ ನೀರು ಮೇಲಕ್ಕೆ ಏರುತ್ತದೆ. ಸಾಮಾನ್ಯವಾಗಿ ಇದು ಸಮುದ್ರದ ಮೇಲ್ಮೈಯಲ್ಲಿ ರೂಪುಗೊಳ್ಳುತ್ತದೆ. ಹೆಚ್ಚಾಗಿ ಇದು ಉಷ್ಣ ವಲಯ ಪ್ರದೇಶದಲ್ಲಿ ರೂಪುಗೊಳ್ಳುತ್ತದೆ.