Asianet Suvarna News Asianet Suvarna News

ಲೈಂಗಿಕ ಕಿರುಕುಳ ಕೇಸ್‌:ಬ್ರಿಜ್‌ಭೂಷಣ್‌ ಸಿಂಗ್‌ಗೆ ಜಾಮೀನು..!

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ಭೂಷಣ್‌ಗೆ ದೆಹಲಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಜಾಮೀನು ಮಂಜೂರು
ಬ್ರಿಜ್‌ಗೆ ಷರತ್ತುಬದ್ದ ಜಾಮೀನು ನೀಡಿದ ಮ್ಯಾಜಿಸ್ಟ್ರೇಟ್‌ ಕೋರ್ಟ್‌
6 ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಬ್ರಿಜ್‌ಭೂಷಣ್ ಸಿಂಗ್

WFI Chief Brij Bhushan gets bail in Wrestler Sexual harassment case kvn
Author
First Published Jul 21, 2023, 11:06 AM IST

ನವದೆಹಲಿ(ಜು.21): 6 ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ಗೆ ದೆಹಲಿ ಮ್ಯಾಜಿಸ್ಟ್ರೇಟ್‌ ಕೋರ್ಟ್ ಜಾಮೀನು ನೀಡಿದೆ. ಗುರುವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಹರ್ಜೀತ್‌ ಸಿಂಗ್‌, ಕೋರ್ಟ್‌ ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗಬಾರದು, ದೂರುದಾರೆಯರಿಗೆ ಬೆದರಿಕೆ ಹಾಕಬಾರದು ಎಂಬ ಷರತ್ತು ವಿಧಿಸಿ ಬ್ರಿಜ್‌ಗೆ ಜಾಮೀನು ಮಂಜೂರು ಮಾಡಿದರು.

ಕಳೆದ ಏಪ್ರಿಲ್‌ನಲ್ಲಿ ಅಪ್ರಾಪ್ತೆ ಸೇರಿ​ದಂತೆ 7 ಮಂದಿ ನೀಡಿದ್ದ ದೂರಿಗೆ ಸಂಬಂಧಿ​ಸಿ​ದಂತೆ ದೆಹಲಿ ಪೊಲೀ​ಸರು ಬ್ರಿಜ್‌​ಭೂ​ಷಣ್‌ ವಿರುದ್ಧ ಪೋಕ್ಸೋ ಸೇರಿ 2 ಎಫ್‌​ಐ​ಆರ್‌ ದಾಖ​ಲಿ​ಸಿ​ದ್ದರು. ಈ ಬಗ್ಗೆ 5 ದೇಶ​ಗಳಲ್ಲಿ ನಡೆದಿದ್ದ ಕುಸ್ತಿ ಕೂಟಗಳ ವೇಳೆ ದಾಖಲಾಗಿದ್ದ ಸಿಸಿಟೀವಿ ದೃಶ್ಯಗಳ ಪರಿ​ಶೀ​ಲ​ನೆ, ಕುಸ್ತಿ​ಪ​ಟು​ಗ​ಳು, ರೆಫ್ರಿ ಹಾಗೂ ಕೋಚ್‌​ಗಳು ಸೇರಿ​ದಂತೆ 180ಕ್ಕೂ ಹೆಚ್ಚು ಮಂದಿಯ ಹೇಳಿಕೆ ದಾಖ​ಲಿಸಿಕೊಂಡಿದ್ದ ಪೊಲೀ​ಸರು ತನಿಖೆ ಪೂರ್ಣಗೊಳಿಸಿ ದೆಹಲಿ ಮ್ಯಾಜಿಸ್ಪ್ರೇಟ್‌ ಕೋರ್ಚ್‌ಗೆ 1500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು

ಸಾತ್ವಿಕ್‌-ಚಿರಾಗ್‌ ಕ್ವಾರ್ಟರ್‌ಗೆ

ಸೋಲ್‌(ಕೊರಿಯಾ): ಭಾರತದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಡಬಲ್ಸ್‌ನ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 2ನೇ ಸುತ್ತಿನ ಪಂದ್ಯದಲ್ಲಿ ಚೀನಾದ ಝೊ ಡೊಂಗ್ ಹಾಗೂ ಹೀ ಜಿಟಿಂಗ್‌ ವಿರುದ್ಧ 21-17, 21-15ರಲ್ಲಿ ಜಯ ಸಾಧಿಸಿದರು. ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಎಚ್‌.ಎಸ್‌.ಪ್ರಣಯ್‌, ಪ್ರಿಯಾನ್ಶು ರಾಜಾವತ್‌, ಮಹಿಳಾ ಡಬಲ್ಸ್‌ನ 2ನೇ ಸುತ್ತಿನಲ್ಲಿ ತ್ರೀಸಾ-ಗಾಯತ್ರಿ ಸೋತು ಹೊರಬಿದ್ದರು.

Wrestlers sexual harassment case: ಬ್ರಿಜ್‌ಭೂಷಣ್‌ಗೆ ತಾತ್ಕಾಲಿಕ ರಿಲೀಫ್..! ಮಧ್ಯಂತರ ಜಾಮೀನು ಮಂಜೂರು

ಹಾಕಿ: ಭಾರತಕ್ಕೆ ಸೋಲು

ರಸ್ಸೆಲ್ಸ್‌ಹೇಯ್ಮ್‌(ಜರ್ಮನಿ): ಭಾರತ ಮಹಿಳಾ ಹಾಕಿ ತಂಡ ಜರ್ಮನಿ ಪ್ರವಾಸದಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ತ್ರಿಕೋನ ಸರಣಿಯ 3ನೇ ಪಂದ್ಯದಲ್ಲಿ ಬುಧವಾರ ಆತಿಥೇಯ ತಂಡದ ವಿರುದ್ಧ 0-2 ಗೋಲುಗಳ ಸೋಲು ಕಂಡಿತು. ಏಷ್ಯನ್‌ ಗೇಮ್ಸ್‌ ಸಿದ್ಧತೆಗಾಗಿ ಕೈಗೊಂಡಿದ್ದ ಪ್ರವಾಸವನ್ನು ಒಂದೂ ಗೆಲುವಿಲ್ಲದೆ ಮುಕ್ತಾಯಗೊಳಿಸಿತು. ಮೊದಲ ಪಂದ್ಯದಲ್ಲಿ ಚೀನಾ, 2ನೇ ಪಂದ್ಯದಲ್ಲಿ ಜರ್ಮನಿ ವಿರುದ್ಧ ಭಾರತ ಪರಾಭವಗೊಂಡಿತ್ತು.

'ಒಂದು ಶನಿವಾರ ನನಗೆ ಕೊಡ್ತಿಯಾ..?': ಪತ್ನಿ ಧನಶ್ರೀನ ಹೀಗೆ ಪ್ರಪೋಸ್ ಮಾಡಿ ಪಟಾಯಿಸಿದ ಚಹಲ್!

ಕಾಮನ್ವೆಲ್ತ್‌ ವೇಟ್‌ಲಿಫ್ಟಿಂಗ್‌: ಭಾರತಕ್ಕೆ ಒಟ್ಟು 20 ಪದಕ

ನೋಯ್ಡಾ: ಇಲ್ಲಿ ಭಾನುವಾರ ಕೊನೆಗೊಂಡ ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ 20 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೊನೆ ದಿನ ಭಾರತದ ಲಿಫ್ಟರ್‌ಗಳು 1 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದರು. ಒಟ್ಟಾರೆ ಕೂಟದಲ್ಲಿ 9 ಚಿನ್ನ, 9 ಬೆಳ್ಳಿ ಹಾಗೂ 2 ಕಂಚು ತನ್ನದಾಗಿಸಿಕೊಂಡಿತು. 109 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಪಂಜಾಬ್‌ನ ಲವ್‌ಪ್ರೀತ್‌ ಒಟ್ಟು 341 ಕೆ.ಜಿ. ಭಾರ ಎತ್ತಿ ಬೆಳ್ಳಿ ಪದಕ ಪಡೆದರೆ, 87 ಕೆ.ಜಿ. ವಿಭಾಗದಲ್ಲಿ ಪೂರ್ಣಿಮಾ ಒಟ್ಟು 227 ಕೆ.ಜಿ. ಭಾರ ಎತ್ತಿ ಕಂಚು ಗೆದ್ದರು. ಇದಕ್ಕೂ ಮೊದಲು ಕೋಮಲ್‌ ಕೋಹರ್‌(45 ಕೆ.ಜಿ.), ಜ್ಞಾನೇಶ್ವರಿ ಯಾದವ್‌(49 ಕೆ.ಜಿ.), ಪೊಪಿ ಹಜಾರಿಕಾ(59 ಕೆ.ಜಿ), ನಿರುಪಮಾ(64 ಕೆ.ಜಿ.), ವನ್ಶಿತಾ ವರ್ಮಾ(81 ಕೆ.ಜಿ.), ಮುಕುಂದ್‌(55 ಕೆ.ಜಿ.), ಶುಭಂ(61 ಕೆ.ಜಿ.), ಅಜಿತ್‌ ಎನ್‌.(73 ಕೆ.ಜಿ.) ಹಾಗೂ ಅಜಯ್‌ ಸಿಂಗ್‌(81 ಕೆ.ಜಿ.) ಚಿನ್ನದ ಪದಕ ಗೆದ್ದಿದ್ದರು.

Follow Us:
Download App:
  • android
  • ios