ಈ ಗೆಲುವಿನ ಮೂಲಕ ಚೊಚ್ಚಲ ವಿಂಬಲ್ಡನ್ ಟ್ರೋಫಿ ಜಯಿಸುವಲ್ಲಿ ಸ್ಪೇನ್ ಆಟಗಾರ್ತಿ ಸಫಲವಾದರು.

ಲಂಡನ್(ಜು.15): 5 ಬಾರಿಯ ವಿಂಬಲ್ಡನ್ ಚಾಂಪಿಯನ್ ವೀನಸ್ ವಿಲಿಯಮ್ಸ್ ಅವರನ್ನು ಅನಯಾಸವಾಗಿ ಬಗ್ಗುಬಡಿದ ಸ್ಪೇನ್'ನ ಗಾರ್ಬೈನ್ ಮುಗುರುಜಾ ವಿಂಬಲ್ಡನ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಇಲ್ಲಿನ ಸೆಂಟರ್ ಕೋರ್ಟ್'ನಲ್ಲಿ ನಡೆದ ಪಂದ್ಯದಲ್ಲಿ 23 ವರ್ಷದ ಮುಗುರುಜಾ, 7-5, 6-0 ನೇರ ಸೆಟ್'ಗಳಲ್ಲಿ ವೀನಸ್ ಎದುರು ಗೆಲುವನ್ನು ತಮ್ಮದಾಗಿಸಿಕೊಂಡರು. ಈ ಗೆಲುವಿನ ಮೂಲಕ ಚೊಚ್ಚಲ ವಿಂಬಲ್ಡನ್ ಟ್ರೋಫಿ ಜಯಿಸುವಲ್ಲಿ ಸ್ಪೇನ್ ಆಟಗಾರ್ತಿ ಸಫಲವಾದರು.

ಸುಮಾರು 9 ವರ್ಷಗಳ ಬಳಿಕ ಪ್ರಶಸ್ತಿ ಹಂತ ತಲುಪಿದ್ದ 37 ವರ್ಷದ ವೀನಸ್, ಪ್ರಶಸ್ತಿ ಸುತ್ತಿನಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಸ್ಪೇನ್ ಆಟಗಾರ್ತಿಯೆದುರು ಮಂಡಿಯೂರಿದರು.

2016ರಲ್ಲಿ ಫ್ರೆಂಚ್ ಓಪನ್'ನಲ್ಲಿ ಸೆರೆನಾ ವಿಲಿಯಮ್ಸ್ ಮಣಿಸಿ ಚೊಚ್ಚಲ ಗ್ರ್ಯಾನ್'ಸ್ಲಾಂ ಎತ್ತಿಹಿಡಿದಿದ್ದ ಮುಗುರುಜಾ ಇಂದು ವೀನಸ್ ವಿಲಿಯಮ್ಸ್ ಮಣಿಸುವ ಮೂಲಕ ಎರಡನೇ ಗ್ರ್ಯಾನ್'ಸ್ಲಾಂ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.