ಟೀಂ ಇಂಡಿಯಾ ಏಕದಿನ ಸರಣಿ ಸೋಲು ಮಾಜಿ ನಾಯಕ ಸೌರವ್ ಗಂಗೂಲಿಗೆ ಯಾವುದೇ ಆಶ್ಚರ್ಯ ತಂದಿಲ್ಲ. ಆದರೆ ತಂಡದ ಕೆಲ ನಿರ್ಧಾರಗಳು ಗಂಗೂಲಿ ತಾಳ್ಮೆಯನ್ನ ಪರೀಕ್ಷಿಸಿದೆ. ಅಷ್ಟಕ್ಕೂ ಸೌರವ್ ಗಂಗೂಲಿಗೆ ಆಕ್ರೋಷ ತರಿಸಿದ ನಿರ್ಧಾರಗಳು ಯಾವುದು?

ಲಂಡನ್(ಜು.18): ಇಂಗ್ಲೆಂಡ್ ವಿರುದ್ಧದ ಏಕದಿನ ಸೋಲಿನ ಬಳಿಕ ಟೀಂ ಇಂಡಿಯಾ ವಿರುದ್ಧ ಆಕ್ರೋಷ ಹೆಚ್ಚಾಗಿದೆ. ಪ್ರತಿಭಾನ್ವಿತ ಹಾಗೂ ಸಮರ್ಥ ಆಟಗಾರರನ್ನ ಆಯ್ಕೆ ಮಾಡದ ಟೀಂ ಮ್ಯಾನೇಜ್ಮೆಂಟ್ ವಿರುದ್ಧ ಇದೀಗ ಮಾಜಿ ನಾಯಕ ಸೌರವ್ ಗಂಗೂಲಿ ಗರಂ ಆಗಿದ್ದಾರೆ.

ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದಾಗ ಪರಿಸ್ಥಿತಿಯನ್ನ ನಿಭಾಯಿಸಿ ದಿಟ್ಟ ಹೋರಾಟ ನೀಡಬಲ್ಲ ಕೆಎಲ್ ರಾಹುಲ್ ಹಾಗೂ ಅಜಿಂಕ್ಯ ರಹಾನೆಯನ್ನ ಕೈಬಿಟ್ಟಿರೋದಕ್ಕೆ ಗಂಗೂಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೆಎಲ್ ರಾಹುಲ್ ಹಾಗೂ ಅಜಿಂಕ್ಯ ರಹಾನೆ ಇಬ್ಬರೂ ಕೂಡ ಕ್ಲಾಸ್ ಬ್ಯಾಟ್ಸ್‌ಮನ್. ಇವರಿಬ್ಬರೂ ಕೂಡ ಇಂಗ್ಲೆಂಡ್ ಕಂಡೀಷನ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇಷ್ಟಾದರೂ ರಾಹಲ್ ಹಾಗೂ ರಹಾನೆಗೆ ಅವಕಾಶ ನೀಡದಿರೋದು ಆಶ್ಚರ್ಯ ತಂದಿದೆ ಎಂದು ಗಂಗೂಲಿ, ಸೋನಿ ಸಿಕ್ಸ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ರಾಹುಲ್ ಹಾಗಾ ರಹಾನೆಗೆ ಕನಿಷ್ಠ 15 ಪಂದ್ಯಗಳಲ್ಲಿ ಅವಕಾಶ ನೀಡಬೇಕು. ಈ ಮೂಲಕ ಆಟಗಾರರ ಫಾರ್ಮ್ ಅಳೆಯಲು ಸಾಧ್ಯ. ಸೆಂಚುರಿ ಸಿಡಿಸಿದ ಮುಂದಿನ ಪಂದ್ಯದಲ್ಲೇ ಡ್ರಾಪ್ ಮಾಡಿರೋದು ಸಮಂಜಸವಲ್ಲ ಎಂದು ಗಂಗೂಲಿ ಹೇಳಿದ್ದಾರೆ.

ಎಂ ಎಸ್ ಧೋನಿ ತಮ್ಮ ಫಾರ್ಮ್ ಕಳೆದುಕೊಂಡಿದ್ದಾರೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಸ್ಥಾನ ಪಡೆಯಬೇಕಾದರೆ, ಮತ್ತೆ ಅದ್ಬುತ ಪ್ರದರ್ಶನ ನೀಡಲೇಬೇಕು. ಆದರೆ ಸದ್ಯ ಧೋನಿ ಪ್ರದರ್ಶನ ನಿಆತಂಕ ತರಿಸುತ್ತಿದೆ ಎಂದು ಗಂಗೂಲಿ ಹೇಳಿದ್ದಾರೆ.