Asianet Suvarna News Asianet Suvarna News

ಬಿಸಿಸಿಐ ಸಲಹಾ ಸಮಿತಿಯಿಂದ ಸಚಿನ್,ಗಂಗೂಲಿ,ಲಕ್ಷ್ಮಣ್‌ಗೆ ಕೊಕ್?

ಟೀಂ ಇಂಡಿಯಾ ಕಳಪೆ ಪ್ರದರ್ಶನದ ಬೆನ್ನಲ್ಲೇ, ಕೋಚ್ ರವಿ ಶಾಸ್ತ್ರಿ ಹುದ್ದೆ ಅಲುಗಾಡುತ್ತಿದೆ. ಇದೀಗ  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್ ಗಂಗೂಲಿ  ಒಳಗೊಂಡಿರುವ ಬಿಸಿಸಿಐ ಸಲಹಾ ಸಮಿತಿ ಸದಸ್ಯರಿಗೂ ಸಂಕಷ್ಟ ಎದುರಾಗಿದೆ.  ಸಲಹಾ ಸಮಿತಿಗೆ ಎದುರಾಗಿರೋ ಆತಂಕ ಏನು? ಇಲ್ಲಿದೆ.

Ganguly Sachin Laxman likely to be removed from BCCI role
Author
Bengaluru, First Published Aug 15, 2018, 3:40 PM IST
  • Facebook
  • Twitter
  • Whatsapp

ಮುಂಬೈ(ಆ.15): ಲೋಧ ಸಮಿತಿ ಶಿಫಾರಸು ಇದೀಗ ಹಲವು ಮಾಜಿ ಕ್ರಿಕೆಟಿಗರಿಗೆ ಸಂಕಷ್ಟ ತಂದೊಡ್ಡಿದೆ. ಇತ್ತೀಚೆಗೆ ಟೀಂ ಇಂಡಿಯಾ ಅಂಡರ್-19 ತಂಡದ ಕೋಚ್ ರಾಹುಲ್ ದ್ರಾವಿಡ್ ಲೋಧ ಸಮಿತಿ ಶಿಫಾರಸಿನಿಂದ ರಾಜಸ್ಥಾನ ರಾಯಲ್ಸ್ ತಂಡ ಮೆಂಟರ್ ಜವಾಬ್ದಾರಿಗೆ ರಾಜಿನಾಮೆ ನೀಡಿದ್ದರು. ಈ ಮೂಲಕ ಸ್ವಹಿತಾಸಕ್ತಿ ಸಂಘರ್ಷದಿಂದ ಪಾರಾಗಿದ್ದರು.

ರಾಹುಲ್ ದ್ರಾವಿಡ್  ಬಳಿಕ ಇದೀಗ ಸ್ವಹಿತಾಸಕ್ತಿ ಸಂಘರ್ಷಕ್ಕೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರು, ಬಿಸಿಸಿಐ ಸಲಹಾ ಸಮಿತಿಯ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್ ಗಂಗೂಲಿಯನ್ನ ಸುತ್ತಿಕೊಂಡಿದೆ.

ಸೌರವ್ ಗಂಗೂಲಿ ಬಂಗಳಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ವಿವಿಎಸ್ ಲಕ್ಷ್ಮಣ್,  ಸನ್ ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿದ್ದಾರೆ.  ಸಮಿತಿ ಮುಖ್ಯಸ್ಥ ಸಚಿನ್ ತೆಂಡೂಲ್ಕರ್ ಪುತ್ರ, ಅರ್ಜುನ್ ತೆಂಡೂಲ್ಕರ್ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಸಲಹಾ ಸಮಿತಿಯ ಮೂವರು ಸದಸ್ಯರು ಕೂಡ ಸ್ವಹಿತಾಸಕ್ತಿ ಸಂಘರ್ಷದಲ್ಲಿದ್ದಾರೆ.

ಸ್ವಹಿತಾಸಕ್ತಿ ಸಂಘರ್ಷದಿಂದ ಪಾರಾಗಲು ಯಾವುದಾರೊಂದು ಹುದ್ದೆ ತ್ಯಜಿಸಬೇಕಾದ ಅನಿವಾರ್ಯತೆ ಇದೀಗ ಸಲಹಾ ಸಮಿತಿ ಸದಸ್ಯರಿಗೆ ಎದುರಾಗಿದೆ. ಹೀಗಾಗಿ ಶೀಘ್ರದಲ್ಲೇ ಸಚಿನ್, ಗಂಗೂಲಿ ಹಾಗೂ ಲಕ್ಷ್ಮಣ್ ಸಲಹಾ ಸಮಿತಿಗೆ ರಾಜಿನಾಮೆ ನೀಡೋ ಸಾಧ್ಯತೆ ಹೆಚ್ಚಿದೆ.

ಇಷ್ಟು ದಿನ ಬಿಸಿಸಿಐ ಸಲಹಾ ಸಮಿತಿ ಸದಸ್ಯರು ಗೌರವ ಹುದ್ದೆ ನಿರ್ವಹಿಸುತ್ತಿದ್ದರು. ಇನ್ಮುಂದೆ ಸಲಹಾ ಸಮಿತಿಗೂ ವೇತನ ನೀಡಲು ಬಿಸಿಸಿಐ ನಿರ್ಧರಿಸಿದೆ.  
 

Follow Us:
Download App:
  • android
  • ios