ಗ್ರೇಗ್ ಚಾಪೆಲ್ ಕೋಚ್ ಆದ ಬಳಿಕ ಗಂಗೂಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ರಾಹುಲ್ ದ್ರಾವಿಡ್ ಅವರನ್ನು ನಾಯಕರನ್ನಾಗಿ ನೇಮಿಸಿದ್ದರು. ದ್ರಾವಿಡ್ ನೇತೃತ್ವದಲ್ಲಿ ಟೀಂ ಇಂಡಿಯಾ 2007ರ ವಿಶ್ವಕಪ್'ನಲ್ಲಿ ಲೀಗ್ ಹಂತದಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದು ಮುಖಭಂಗ ಅನುಭವಿಸಿತ್ತು.

ನವದೆಹಲಿ(ಫೆ.27): 2005ರಲ್ಲಿ ಭಾರತ ತಂಡದ ನೂತನ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ರೆಗ್ ಚಾಪೆಲ್‌'ರನ್ನು ನೇಮಿಸಲು ಜಗ್‌'ಮೋಹನ್ ದಾಲ್ಮೀಯಗೆ ನಾನೇ ಶಿಫಾರಸು ಮಾಡಿದ್ದು ಎಂದು ಸೌರವ್ ಗಂಗೂಲಿ ತಮ್ಮ ಆತ್ಮಕಥನ ‘ಎ ಸೆಂಚುರಿ ಈಸ್ ನಾಟ್ ಎನಫ್’ನಲ್ಲಿ ಬರೆದುಕೊಂಡಿದ್ದಾರೆ.

‘ಚಾಪೆಲ್‌'ರ ಕ್ರಿಕೆಟ್ ಜ್ಞಾನ ನನ್ನನ್ನು ಆಕರ್ಷಿಸಿತ್ತು. ಭಾರತ ತಂಡದ ಕೋಚ್ ಆಗಲು ಅವರೇ ಸೂಕ್ತ ಎಂದು ನನಗನಿಸಿತ್ತು’ ಎಂದು ಬರೆದಿರುವ ಸೌರವ್, ‘ಚಾಪೆಲ್ ನೇಮಕದ ಬಗ್ಗೆ ಗವಾಸ್ಕರ್ ಹಾಗೂ ಇಯಾನ್ ಚಾಪೆಲ್ (ಗ್ರೆಗ್ ಸಹೋದರ) ಎಚ್ಚರಿಸಿದ್ದರು. ಅವರ ಮಾತನ್ನು ಮೀರಿ ಚಾಪೆಲ್ ಬಗ್ಗೆ ಶಿಫಾರಸು ಮಾಡಿದ್ದೆ. ನನ್ನಿಂದಾದ ದೊಡ್ಡ ತಪ್ಪದು’ ಎಂದಿದ್ದಾರೆ. ನಾಯಕತ್ವ ಕಿತ್ತುಕೊಳ್ಳುವುದಲ್ಲದೆ, ನನ್ನನ್ನು ತಂಡದಿಂದ ಕೈಬಿಟ್ಟ ಚಾಪೆಲ್‌'ರನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಗಂಗೂಲಿ ಬರೆದಿದ್ದಾರೆ.