Asianet Suvarna News Asianet Suvarna News

‘ಪೋ​ಡಿ​ಯಂನಿಂದ ಫುಟ್‌​ಪಾ​ತ್‌​ವ​ರೆಗೆ': ಫುಟ್‌​ಪಾ​ತ್‌ನಲ್ಲೇ ಮಲ​ಗಿದ ಒಲಿಂಪಿಕ್ಸ್‌ ಸಾಧ​ಕ​ರು!

ಬ್ರಿಜ್‌​ಭೂ​ಷಣ್‌ ವಿರುದ್ಧ ಎಫ್‌​ಐ​ಆ​ರ್‌ಗೆ ಕುಸ್ತಿ​ಪ​ಟು​ಗಳ ಪಟ್ಟು
ನ್ಯಾಯ ಸಿಗುವ​ವ​ರೆಗೂ ಹೋರಾ​ಟದ ಎಚ್ಚ​ರಿ​ಕೆ
ಲೈಂಗಿಕ ಕಿರು​ಕುಳ ಸೇರಿ​ ಗಂಭೀರ ಎದುರಿಸುತ್ತಿರುವ ಬ್ರಿಜ್‌ಭೂಷಣ್‌

From Podium To Footpath Olympic medalist Wrestlers Spend Night At Delhi Protest kvn
Author
First Published Apr 25, 2023, 10:05 AM IST | Last Updated Apr 25, 2023, 10:05 AM IST

ನವ​ದೆ​ಹ​ಲಿ(ಏ.25): ಲೈಂಗಿಕ ಕಿರು​ಕುಳ ಸೇರಿ​ ಗಂಭೀರ ಪ್ರಕ​ರ​ಣ​ಗ​ಳಿಗೆ ಸಂಬಂಧಿ​ಸಿ​ದಂತೆ ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌(ಡ​ಬ್ಲ್ಯು​ಎ​ಫ್‌​ಐ) ಮಾಜಿ ಅಧ್ಯ​ಕ್ಷ ಬ್ರಿಜ್‌​ಭೂ​ಷಣ್‌ ವಿರು​ದ್ಧ ಕ್ರಮಕೈಗೊ​ಳ್ಳಲು ಒತ್ತಾ​ಯಿಸಿ ದೇಶದ ಅಗ್ರ ಕುಸ್ತಿ​ಪ​ಟು​ಗಳು ಆಹೋ​ರಾತ್ರಿ ಧರಣಿ ಆರಂಭಿ​ಸಿದ್ದು, ಭಾನು​ವಾರ ಜಂತ​ರ್‌​ಮಂತ​ರ್‌​ನಲ್ಲಿ ಫುಟ್‌​ಪಾ​ತ್‌​ನಲ್ಲೇ ಮಲ​ಗಿ​ದ​ರು.

ಒಲಿಂಪಿಕ್ಸ್‌ ಪದಕ ವಿಜೇ​ತ​ರಾದ ಭಜ​ರಂಗ್‌ ಪೂನಿಯಾ ಹಾಗೂ ಸಾಕ್ಷಿ ಮಲಿಕ್‌, 3 ಬಾರಿ ಕಾಮ​ನ್‌​ವೆಲ್ತ್‌ ಚಿನ್ನ ವಿಜೇತೆ ವಿನೇಶ್‌ ಫೋಗಾಟ್‌ ಸೇರಿ​ದಂತೆ ಪ್ರಮು​ಖರು ಭಾನು​ವಾರ ಧರಣಿ ಆರಂಭಿ​ಸಿ​ದ್ದರು. ಬಳಿಕ ರಾತ್ರಿ ಅಲ್ಲೇ ತಂಗಿ​ದ್ದಾರೆ. ಈ ಬಗ್ಗೆ ಫೋಟೋ ಹಂಚಿ​ಕೊಂಡಿ​ರುವ ವಿನೇಶ್‌, ‘ಪೋ​ಡಿ​ಯಂನಿಂದ ಫುಟ್‌​ಪಾ​ತ್‌​ವ​ರೆಗೆ. ಮಧ್ಯ​ರಾತ್ರಿ ಆಕಾ​ಶದ ಕೆಳಗೆ ನ್ಯಾಯಕ ನಿರೀ​ಕ್ಷೆ​ಯ​ಲ್ಲಿ​’ ಎಂದು ಬರೆ​ದು​ಕೊಂಡಿ​ದ್ದಾರೆ.

ಬ್ರಿಜ್‌​ಭೂ​ಷಣ್‌ ವಿರುದ್ಧ ಶೀಘ್ರ ಕ್ರಮ​ಕೈ​ಗೊ​ಳ್ಳ​ಬೇಕು ಹಾಗೂ ಮೇರಿ ಕೋಮ್‌ ನೇತೃ​ತ್ವದ ಸಮಿತಿಯು ಕ್ರೀಡಾ ಸಚಿ​ವಾ​ಲ​ಯಕ್ಕೆ ನೀಡಿದ್ದ ವರ​ದಿ​ಯನ್ನು ಬಹಿ​ರಂಗ​ಪ​ಡಿ​ಸುವಂತೆ ಪಟ್ಟು​ಹಿ​ಡಿ​ದಿದ್ದು, ನ್ಯಾಯ ಸಿಗುವ​ವ​ರೆಗೂ ವಿರ​ಮಿ​ಸು​ವು​ದಿಲ್ಲ ಎಂದು ಎಚ್ಚರಿಕೆ ನೀಡಿ​ದ್ದಾರೆ. ಅಲ್ಲದೇ ತಮ್ಮ ಹೋರಾ​ಟ​ವನ್ನು ಬೆಂಬ​ಲಿ​ಸು​ವಂತೆ ಎಲ್ಲಾ ರಾಜ​ಕೀಯ ಪಕ್ಷ​ಗ​ಳಿಗೂ ಮನವಿ ಮಾಡಿ​ದ್ದಾ​ರೆ.

‘ಸುಪ್ರೀಂಗೆ ಹೋಗ್ತೇ​ವೆ’

ಇನ್ನು, ಬ್ರಿಜ್‌ ವಿರುದ್ಧ ಎಫ್‌​ಐ​ಆರ್‌ ದಾಖ​ಲಿ​ಸದಿದ್ದ​ರೆ ಸುಪ್ರೀಂ ಕೋರ್ಚ್‌ ಮೊರೆ ಹೋಗುವು​ದಾಗಿ ಕುಸ್ತಿ​ಪ​ಟು​ಗಳು ಎಚ್ಚ​ರಿಕೆ ನೀಡಿ​ದ್ದಾರೆ. ಈಗಾ​ಗಲೇ ಕುಸ್ತಿ​ಪ​ಟು​ಗಳು ಶುಕ್ರ​ವಾರ ಪೊಲೀ​ಸ​ರಿಗೆ ದೂರು ಸಲ್ಲಿ​ಸಿದ್ದು, ಈವ​ರೆಗೆ ಎಫ್‌​ಐ​ಆರ್‌ ದಾಖ​ಲಾ​ಗಿಲ್ಲ. ಇದೇ ವೇಳೆ ಡೆಲ್ಲಿ ಪೊಲೀ​ಸರು ಪ್ರಕ​ರ​ಣಕ್ಕೆ ಸಂಬಂಧಿ​ಸಿದ ವರ​ದಿ​ಯನ್ನು ಸಲ್ಲಿ​ಸಲು ತನಿಖಾ ಸಮಿ​ತಿಗೆ ಸೂಚಿ​ಸಿ​ದ್ದಾರೆ ಎಂದು ತಿಳಿ​ದು​ಬಂದಿ​ದೆ.

ಬ್ರಿಜ್‌ಭೂಷಣ್ ವಿರುದ್ದ ಕುಸ್ತಿಪಟುಗಳಿಂದ ಮತ್ತೆ ಪ್ರತಿಭಟನೆ..!

ಡಬ್ಲ್ಯು​ಎ​ಫ್‌​ಐ ಚುನಾ​ವ​ಣೆಗೆ ತಡೆ

ಈ ನಡುವೆ ಮೇ 7ರಂದು ನಡೆ​ಯ​ಬೇ​ಕಿದ್ದ ಡಬ್ಲ್ಯು​ಎ​ಫ್‌ಐ ಚುನಾ​ವ​ಣೆಗೆ ಕೇಂದ್ರ ಕ್ರೀಡಾ ಸಚಿ​ವಾ​ಯಲ ತಡೆ ನೀಡಿದೆ. ಅಲ್ಲದೇ ಹೊಸ ಸಮಿ​ತಿ​ಯೊಂದನ್ನು ರಚಿಸಿ, 45 ದಿನ​ಗ​ಳಲ್ಲಿ ಚುನಾವಣೆ ಪ್ರಕ್ರಿ​ಯೆ​ಗ​ಳನ್ನು ಮುಗಿ​ಸು​ವಂತೆ ಭಾರ​ತೀಯ ಒಲಿಂಪಿಕ್ಸ್‌ ಸಂಸ್ಥೆ​(​ಐ​ಒ​ಎ​)ಗೆ ಸೂಚನೆ ನೀಡಿದೆ. ಫೆಡ​ರೇ​ಶನ್‌ನ ಕಾರ‍್ಯ​ಚ​ಟು​ವ​ಟಿ​ಕೆ, ಟೂರ್ನಿ​ಗ​ಳಿಗೆ ಸ್ಪರ್ಧಿ​ಗಳ ಆಯ್ಕೆ​ಯನ್ನು ಕೂಡಾ ಇದೇ ಸಮಿತಿ ಮಾಡ​ಲಿದೆ. ಈ ಬಗ್ಗೆ ಐಒಎ ಅಧ್ಯಕ್ಷೆ ಪಿ.ಟಿ.​ಉಷಾ ಪ್ರತಿ​ಕ್ರಿ​ಯಿ​ಸಿದ್ದು, ‘ಚು​ನಾ​ವಣೆ ಪ್ರಕ್ರಿಯೆ ಬಗ್ಗೆ ಏ.27ಕ್ಕೆ ಸಭೆ ನಡೆ​ಸ​ಲಿ​ದ್ದೇ​ವೆ’ ಎಂದಿ​ದ್ದಾ​ರೆ. ಜನ​ವ​ರಿ​ಯಲ್ಲಿ ಕುಸ್ತಿ​ಪ​ಟು​ಗ​ಳಿಂದ ಆರೋ​ಪ​ಗ​ಳಿಗೆ ತುತ್ತಾದ ಬಳಿಕ ಡಬ್ಲ್ಯುಎಫ್‌ಐನ ಎಲ್ಲಾ ಕಾರ‍್ಯಚಟುವಟಿಕೆಗಳನ್ನು ಕೇಂದ್ರ ಕ್ರೀಡಾ ಸಚಿವಾಲಯ ಸ್ಥಗಿತಗೊಳಿಸಿತ್ತು. ಬಳಿಕ ಚುನಾ​ವಣೆ ಘೋಷ​ಣೆ​ಯಾ​ದರೂ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಬ್ರಿಜ್‌​ಭೂ​ಷಣ್‌ ಸ್ಪಷ್ಟ​ಪ​ಡಿ​ಸಿ​ದ್ದರು.

ಕ್ರೀಡಾ​ಪ​ಟು​ಗ​ಳಿಗೆ ಮೂಲ​ಸೌ​ಕರ್ಯ ಒದ​ಗಿ​ಸಿ: ಮೋದಿ

ಇಂಫಾ​ಲ: ದೇಶ​ದ​ಲ್ಲಿ​ರುವ ಎಲ್ಲಾ ಪ್ರತಿ​ಭಾ​ನ್ವಿತ ಕ್ರೀಡಾ​ಪ​ಟು​ಗ​ಳಿಗೂ ಗುಣ​ಮ​ಟ್ಟದ ಮೂಲ​ಸೌ​ಕರ್ಯ ಒದ​ಗಿ​ಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾ​ರ​ಗಳ ಕ್ರೀಡಾ ಸಚಿ​ವ​ರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿ​ದ್ದಾರೆ. 

ಮಣಿ​ಪುರ ರಾಜ​ಧಾನಿ ಇಂಫಾ​ಲ​ದಲ್ಲಿ ನಡೆದ ಎಲ್ಲಾ ರಾಜ್ಯ​ಗ​ಳ ಕ್ರೀಡಾ ಸಚಿ​ವರ ಸಭೆ​ಯಲ್ಲಿ ವರ್ಚು​ವಲ್‌ ಆಗಿ ಮಾತ​ನಾ​ಡಿದ ಅವರು, ‘ಅ​ಥ್ಲೀ​ಟ್‌​ಗ​ಳಿಗೆ ಯಾವುದೇ ಕೊರ​ತೆ​ಯಾ​ಗ​ದಂತೆ ನೋಡಿ​ಕೊ​ಳ್ಳ​ಬೇಕು. ಅಲ್ಲದೇ ಅಲ್ಪಾ​ವಧಿ, ಮಧ್ಯಮ ಅವಧಿ ಹಾಗೂ ದೀರ್ಘ ಅವ​ಧಿಯ ಗುರಿ ಇಟ್ಟು​ಕೊಂಡು ಕಾರಾರ‍ಯ​ಚ​ರಿ​ಸ​ಬೇಕು ಎಂದು ಸೂಚಿ​ಸಿ​ದ್ದಾರೆ. ಅಲ್ಲದೇ ಜಿಲ್ಲಾ ಮಟ್ಟ​ದಲ್ಲಿ ಮೂಲ​ಸೌ​ಕ​ರ್ಯ​ಗಳು ಅಭಿ​ವೃದ್ಧಿ ಪಡಿ​ಸಿ​ದಂತೆಯೇ ಬ್ಲಾಕ್‌ ಮಟ್ಟ​ದಲ್ಲೂ ಎಲ್ಲಾ ರೀತಿಯ ಸೌಲ​ಭ್ಯ​ಗಳು ಸಿಗು​ವಂತೆ ಮಾಡ​ಬೇಕು. ಇದರಿಂದ ಮಾತ್ರವೇ ದೇಶದ ಕ್ರೀಡಾ ಚಟು​ವ​ಟಿ​ಕೆ​ಗಳು ಇನ್ನಷ್ಟು ಪ್ರಗತಿ ಸಾಧಿ​ಸ​ಲಿ​ದೆ’ ಎಂದಿ​ದ್ದಾರೆ.

Latest Videos
Follow Us:
Download App:
  • android
  • ios