55ನೇ ಶ್ರೇಯಾಂಕಿತ ಪೇರ್ ಸೖಪ್ರೋಟ್ ಮಾರ್ಕಸ್ ಬಾಗ್ದಾಟಿಸ್ ವಿರುದ್ಧ 6-3, 3-6, 6-2 ಸೆಟ್’ಗಳಲ್ಲಿ ಮುಗ್ಗರಿಸಿದರು. ಆ ನಂತರ ಸೋಲಿನ ಹತಾಶೆಯಲ್ಲಿ ಮೂರು ರಾಕೆಟ್’ಗಳನ್ನು ಕೋರ್ಟ್’ನಲ್ಲೇ ಮುರಿದು ಅನುಚಿತ ವರ್ತನೆ ತೋರಿದರು. 

ವಾಷಿಂಗ್ಟನ್(ಆ.03]: ಫ್ರಾನ್ಸ್‌ನ ಟೆನಿಸ್ ಆಟಗಾರ ಬೆನೊಯಿಟ್ ಪೇರ್, ಎಟಿಪಿಯಿಂದ ₹11 ಲಕ್ಷ ದಂಡ ಹಾಕಿಸಿಕೊಂಡಿದ್ದಾರೆ. ಇಲ್ಲಿ ನಡೆಯುತ್ತಿರುವ ಸಿಟಿ ಓಪನ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲುಂಡ ಪೇರ್, ಹತಾಶೆಯಿಂದ ಅಂಕಣದಲ್ಲಿ 3 ಟೆನಿಸ್ ರಾಕೆಟ್‌ಗಳನ್ನು ಮುರಿದು ಹಾಕಿದರು. ಅನುಚಿತ ವರ್ತನೆ ತೋರಿದ್ದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿದೆ ಎಂದು ಎಟಿಪಿ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

55ನೇ ಶ್ರೇಯಾಂಕಿತ ಪೇರ್ ಸೖಪ್ರೋಟ್ ಮಾರ್ಕಸ್ ಬಾಗ್ದಾಟಿಸ್ ವಿರುದ್ಧ 6-3, 3-6, 6-2 ಸೆಟ್’ಗಳಲ್ಲಿ ಮುಗ್ಗರಿಸಿದರು. ಆ ನಂತರ ಸೋಲಿನ ಹತಾಶೆಯಲ್ಲಿ ಮೂರು ರಾಕೆಟ್’ಗಳನ್ನು ಕೋರ್ಟ್’ನಲ್ಲೇ ಮುರಿದು ಅನುಚಿತ ವರ್ತನೆ ತೋರಿದರು. 

View post on Instagram

ಪ್ರತಿ ರಾಕೆಟ್‌ನ ಬೆಲೆ ಸುಮಾರು ₹17 ಸಾವಿರ ಇರಬಹುದು ಎಂದು ಅಂದಾಜಿಸಲಾಗಿದೆ. ಪೇರ್, ರಾಕೆಟ್ ಮುರಿದು ಹಾಕುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.