Asianet Suvarna News Asianet Suvarna News

ಫ್ರೆಂಚ್ ಓಪನ್: ಸೆಮಿಫೈನಲ್'ಗೆ ಲಗ್ಗೆಯಿಟ್ಟ ಸಿಂಧು, ಪ್ರಣಯ್, ಶ್ರೀಕಾಂತ್; ಫೈನಲ್'ಗಾಗಿ ಶ್ರೀಕಾಂತ್-ಪ್ರಣಯ್ ಕಾದಾಟ

ಇದೀಗ ಸೆಮಿಫೈನಲ್'ನಲ್ಲಿ ಶ್ರೀಕಾಂತ್ ತಮ್ಮವರೇ ಆದ ಪ್ರಣಯ್ ಅವರನ್ನು ಎದುರಿಸಲಿದ್ದಾರೆ  

French Open Super Series PV Sindhu Advances HS Prannoy To Face Kidamdi Srikanth In Semis
  • Facebook
  • Twitter
  • Whatsapp

ಪ್ಯಾರಿಸ್(ಅ.28): ಭಾರತದ ಅನುಭವಿ ಶಟ್ಲರ್‌'ಗಳಾದ ಪಿ.ವಿ. ಸಿಂಧು ಹಾಗೂ ಎಚ್.ಎಸ್.ಪ್ರಣಯ್, ಕೀಡಂಬಿ ಶ್ರೀಕಾಂತ್ ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌'ಫೈನಲ್'ನಲ್ಲಿ ಸಿಂಧು 21-14, 21-14 ಗೇಮ್'ಗಳಿಂದ ಚೀನಾದ ಚೆನ್ ಯುಫಿ ವಿರುದ್ಧ ಗೆಲುವು ಸಾಧಿಸಿ, ಸೆಮೀಸ್‌'ಗೇರಿದರು. ಆರಂಭದಿಂದಲೂ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಸಿಂಧು, 41 ನಿಮಿಷದಲ್ಲಿ ಪಂದ್ಯವನ್ನು ಮುಗಿಸಿದರು.

ಇನ್ನು ಪುರುಷರ ಸಿಂಗಲ್ಸ್‌'ನ ಕ್ವಾರ್ಟರ್'ಫೈನಲ್‌'ನಲ್ಲಿ ದ.ಕೊರಿಯಾದ ಹೈಯೊಕ್ ಜಿನ್ ಜೀನ್ ವಿರುದ್ಧ ಪ್ರಣಯ್ 21-16, 21-16 ಅಂತರದ ಗೆಲುವು ಸಾಧಿಸಿದರು. ತೀವ್ರ ಹಣಾಹಣಿಯಿಂದ ಸಾಗಿದ ಪಂದ್ಯದಲ್ಲಿ ಕೊರಿಯಾ ಆಟಗಾರ ಒಂದು ಹಂತದಲ್ಲಿ ಮೇಲುಗೈ ಸಾಧಿಸಿದರು. ಈ ವೇಳೆ ಆಕ್ರಮಣಕಾರಿ ಆಟಕ್ಕೆ ಮುಂದಾದ ಪ್ರಣಯ್ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದರು.

ಇನ್ನು ಮತ್ತೊಂದು ಪಂದ್ಯದಲ್ಲಿ ಭಾರತದ ಮತ್ತೋರ್ವ ಅನುಭವಿ ಶಟ್ಲರ್ ಕೀಡಂಬಿ ಶ್ರೀಕಾಂತ್ ಕೂಡಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಡೆನ್ಮಾರ್ಕ್ ಓಪನ್'ನಲ್ಲಿ ಚಾಂಪಿಯನ್ ಆಗಿದ್ದ ಶ್ರೀಕಾಂತ್ ಚೀನಾದ ಎದುರಾಳಿ ಶೀ ಯುಕೀ ವಿರುದ್ಧ 8-21, 21-19, 21-09 ಗೇಮ್'ಗಳಿಂದ ಜಯ ಸಾಧಿಸಿದರು.

ಇದೀಗ ಸೆಮಿಫೈನಲ್'ನಲ್ಲಿ ಶ್ರೀಕಾಂತ್ ತಮ್ಮವರೇ ಆದ ಪ್ರಣಯ್ ಅವರನ್ನು ಎದುರಿಸಲಿದ್ದಾರೆ  

Follow Us:
Download App:
  • android
  • ios