French Open: ಇಗಾ, ಡ್ಯಾನಿಲ್ ಪ್ರೀ ಕ್ವಾರ್ಟರ್‌ಗೆ ಲಗ್ಗೆ
* ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟ ಇಗಾ ಸ್ವಿಯಾಟೆಕ್
* ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನಂ.2 ಡ್ಯಾನಿಲ್ ಮೆಡ್ವೆಡೆವ್ ಕೂಡಾ ಪ್ರೀ ಕ್ವಾರ್ಟರ್‌ಗೆ ಲಗ್ಗೆ
* ರೋಹನ್ ಬೋಪಣ್ಣ ಹಾಗೂ ಮಿಡ್ಡೆಲ್ಕೊಪ್ ಜೋಡಿ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
ಪ್ಯಾರಿಸ್(ಮೇ.29): ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ (French Open Tennis Grand slam) ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್ (Iga Swiatek), ವಿಶ್ವ ನಂ.2 ಡ್ಯಾನಿಲ್ ಮೆಡ್ವೆಡೆವ್ (Daniil Medvedev) ಪ್ರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್ 3ನೇ ಸುತ್ತಿನ ಪಂದ್ಯದಲ್ಲಿ, 2020ರ ಫ್ರೆಂಚ್ ಓಪನ್ ಚಾಂಪಿಯನ್ ಸ್ವಿಯಾಟೆಕ್, ಮೊಂಟೆನೆಗ್ರೋದ ಡಂಕಾ ಕೊವಿನಿಕ್ ವಿರುದ್ಧ 6-3, 7-5 ನೇರ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಮುಂದಿನ ಸುತ್ತಿನಲ್ಲಿ ಅವರು ಚೀನಾದ ಝೆಂಗ್ ವಿರುದ್ಧ ಸೆಣಸಾಡಲಿದ್ದಾರೆ. ಆದರೆ ವಿಶ್ವ ನಂ.3 ಸ್ಪೇನ್‌ನ ಪೌಲಾ ಬಡೋಸಾ, ನಂ.7 ಶ್ರೇಯಾಂಕಿತೆ ಬೆಲಾರಸ್‌ನ ಸಬಲೆಂಕಾ 3ನೇ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು.
ಪುರುಷರ ಸಿಂಗಲ್ಸ್ 3ನೇ ಸುತ್ತಿನಲ್ಲಿ ಯುಎಸ್ ಓಪನ್ ಹಾಲಿ ಚಾಂಪಿಯನ್ ರಷ್ಯಾದ ಮೆಡ್ವೆಡೆವ್, ಸರ್ಬಿಯಾದ ಮಿಯೋಮಿರ್ ಕೆಕ್ಮನೋವಿಕ್ ವಿರುದ್ಧ 6-2, 6-4, 6-2 ಗೆಲುವು ಸಾಧಿಸಿದರು. ನಂ.7 ಶ್ರೇಯಾಂಕಿತ ರಷ್ಯಾದ ಆ್ಯಂಡ್ರೆ ರುಬ್ಲೆವ್, ಚಿಲಿಯ ಕ್ರಿಸ್ಟಿಯನ್ ವಿರುದ್ಧ ಗೆದ್ದು ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟರು.
ಬೋಪಣ್ಣ ಜೋಡಿ ಕ್ವಾರ್ಟರ್‌ಗೆ
ಟೂರ್ನಿಯಲ್ಲಿ ಭಾರತದ ರೋಹನ್ ಬೋಪಣ್ಣ (Rohan Bopanna) ಹಾಗೂ ನೆದರ್‌ಲೆಂಡ್‌್ಸನ ಮಿಡ್ಡೆಲ್ಕೊಪ್ ಜೋಡಿ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಶನಿವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ವಿಂಬಲ್ಡನ್ ಹಾಲಿ ಚಾಂಪಿಯನ್, ವಿಶ್ವ ನಂ.2 ಕ್ರೊವೇಷಿಯಾದ ಮೇಟ್ ಪಾವಿಚ್-ನಿಕೋಲ್ ಮೆಕ್ಟಿಚ್ ಜೋಡಿಯನ್ನು 6-7(3), 7-6(3), 7-6(10) ಸೆಟ್‌ಗಳಲ್ಲಿ ರೋಚಕವಾಗಿ ಮಣಿಸಿತು. ಕ್ವಾರ್ಟರ್‌ನಲ್ಲಿ ಈ ಜೋಡಿ ಬ್ರಿಟನ್‌ನ ಗ್ಲಾಸ್‌ಪೂಲ್-ಫಿನ್ಲೆಂಡ್‌ನ ಹೆಲಿಯೊವಾರ ಜೋಡಿಯನ್ನು ಎದುರಿಸಲಿದೆ. ಡಬಲ್ಸ್‌ನ ವಿಶ್ವ ನಂ.16 ಬೋಪಣ್ಣಗೆ ಇದು ಟೂರ್ನಿಯಲ್ಲಿ 5ನೇ ಕ್ವಾರ್ಟರ್ ಫೈನಲ್.
ಚೊಚ್ಚಲ ಐಎನ್‌ಬಿಎಲ್: ಬೆಂಗ್ಳೂರು ತಂಡಗಳು ಔಟ್
ಬೆಂಗಳೂರು: ಚೊಚ್ಚಲ ಆವೃತ್ತಿಯ 3*3 ಇಂಡಿಯನ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್(ಐಎನ್‌ಬಿಎಲ್) ಫೈನಲ್ಸ್‌ನಲ್ಲಿ ಆತಿಥೇಯ ಬೆಂಗಳೂರು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲು ವಿಫಲವಾಗಿವೆ. ಶನಿವಾರ ನಡೆದ ಪುರುಷರ ವಿಭಾಗದ ‘ಬಿ’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ತಂಡ ಚೆನ್ನೈ ವಿರುದ್ಧ ಸೋತ ಹೊರತಾಗಿಯೂ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಆದರೆ ಅಂತಿಮ 16ರ ಸುತ್ತಿನಲ್ಲಿ ಬೆಂಗಳೂರು, ಜೈಪುರ ವಿರುದ್ಧ ಪರಾಭವವಗೊಂಡಿತು. ಮಹಿಳೆಯರ ವಿಭಾಗದ ‘ಇ’ ಗುಂಪಿನ ಕೊನೆ ಪಂದ್ಯದಲ್ಲಿ ಬೆಂಗಳೂರು ತಂಡ ಇಂದೋರ್ ವಿರುದ್ಧ ಜಯಗಳಿಸಿದರೂ, ಅಂತಿಮ 32ರ ಸುತ್ತಿನಲ್ಲಿ ಪಂಜಿಮ್‌ಗೆ ಶರಣಾಗಿ ಟೂರ್ನಿಯಿಂದ ಹೊರಬಿತ್ತು.
French Open ರಾಫಾ, ಜೋಕೋ ಪ್ರೀ ಕ್ವಾರ್ಟರ್‌ಗೆ ಲಗ್ಗೆ
ಅಂಡರ್-18 ಬಾಲಕರ ವಿಭಾಗದಲ್ಲಿ ಬೆಂಗಳೂರು ಅಂತಿಮ 16ರ ಸುತ್ತಿನಲ್ಲಿ ಲಖನೌ ವಿರುದ್ಧ ಸೋಲನುಭವಿಸಿತು. ಬಾಲಕಿಯರ ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ ಮುಂಬೈ ವಿರುದ್ಧ ಗೆದ್ದ ಬೆಂಗಳೂರು ದಕ್ಷಿಣ ತಂಡ ಕ್ವಾರ್ಟರ್‌ಗೆ ಲಗ್ಗೆ ಇಟ್ಟಿತು. ಆದರೆ ಬೆಂಗಳೂರು ಪೂರ್ವ ತಂಡ ಟೂರ್ನಿಯಿಂದ ಹೊರಬಿ