Asianet Suvarna News Asianet Suvarna News

French Open ರಾಫಾ, ಜೋಕೋ ಪ್ರೀ ಕ್ವಾರ್ಟರ್‌ಗೆ ಲಗ್ಗೆ

* ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಡಾಲ್, ಜೋಕೋವಿಚ್ ಭರ್ಜರಿ ಪ್ರದರ್ಶನ

* ಹಾಲಿ ಚಾಂಪಿಯನ್‌ ನೋವಾಕ್ ಜೋಕೋವಿಚ್‌ಗೆ ಮೂರನೇ ಸುತ್ತಿನಲ್ಲಿ ಸುಲಭ ಜಯ

* ನೆದರ್ಲೆಂಡ್ಸ್‌ನ ಬೊಟಿಕ್‌ ವ್ಯಾನ್‌ ಡೆ ವಿರುದ್ದ ರಾಫೆಲ್ ನಡಾಲ್ ಭರ್ಜರಿ ಜಯಭೇರಿ

French Open 2022 Rafael Nadal Novak Djokovic enters pre quarter final kvn
Author
Bengaluru, First Published May 28, 2022, 8:43 AM IST

ಪ್ಯಾರಿಸ್(ಮೇ28)‌: ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌, ಮಾಜಿ ಚಾಂಪಿಯನ್‌ ರಾಫೆಲ್‌ ನಡಾಲ್‌ (Rafael Nadal) ಪ್ರಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶುಕ್ರವಾರ ಪುರುಷರ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ವಿಶ್ವ ನಂ.1, ಸರ್ಬಿಯಾದ ನೋವಾಕ್ ಜೋಕೋವಿಚ್‌, ಸ್ಲೊವೇನಿಯಾದ ಅಲ್ಜಾಜ್‌ ಬೆದೆನೆ ವಿರುದ್ಧ 6-3, 6-3, 6-2 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ(French Open Tennis Tournament) ಪ್ರಿ ಕ್ವಾರ್ಟರ್‌ನಲ್ಲಿ ಅವರು ವಿಶ್ವ ನಂ.16 ಅರ್ಜೆಂಟೀನಾದ ಡಿಯಾಗೊ ಶ್ವಾಟ್ಜ್‌ಮನ್‌ ವಿರುದ್ಧ ಸೆಣಸಾಡಲಿದ್ದಾರೆ. ಮತ್ತೊಂದೆಡೆ 21 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನಡಾಲ್‌, ನೆದರ್ಲೆಂಡ್ಸ್‌ನ ಬೊಟಿಕ್‌ ವ್ಯಾನ್‌ ಡೆ ವಿರುದ್ಧ 6-3, 6-2, 6-4 ಸೆಟ್‌ಗಳಿಂದ ಜಯಭೇರಿ ಬಾರಿಸಿದರು.

ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.14 ಸ್ವಿಜರ್‌ಲೆಂಡ್‌ನ ಬೆನ್ಸಿಕ್‌ ವಿರುದ್ಧ ನಂ.18 ಶ್ರೇಯಾಂಕಿತೆ ಕೆನಡಾದ ಲೈಲಾ ಫೆರ್ನಾಂಡೆಜ್‌ ಗೆಲುವು ಸಾಧಿಸಿದರು. ಬೆಲಾರಸ್‌ನ ಸಾಸ್ನೋವಿಚ್‌ ಕೂಡಾ 4ನೇ ಸುತ್ತು ತಲುಪಿದರು. ಆದರೆ 2018ರ ಫ್ರೆಂಚ್‌ ಓಪನ್‌ ಚಾಂಪಿಯನ್‌ ರೊಮೇನಿಯಾದ ಸಿಮೋನಾ ಹಾಲೆಪ್‌ 2ನೇ ಸುತ್ತಿನಲ್ಲಿ ಅಭಿಯಾನ ಕೊನೆಗೊಳಿಸಿದ್ದಾರೆ. ಗುರುವಾರ ಮಹಿಳಾ ಸಿಂಗಲ್ಸ್‌ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಹಾಲೆಪ್‌, ಚೀನಾದ ಝಿಂಗ್‌ ವಿರುದ್ಧ 6-2, 2-6, 1-6 ಸೆಟ್‌ಗಳಲ್ಲಿ ಪರಾಭವಗೊಂಡರು.

French Open 2022: ಮೂರನೇ ಸುತ್ತಿಗೆ ರಾಫಾ, ಇಗಾ ಲಗ್ಗೆ

ಮಿಶ್ರ ಡಬಲ್ಸ್‌ನಲ್ಲಿ ರಾಮನಾಥನ್‌ ಔಟ್‌

ಪುರುಷರ ಡಬಲ್ಸ್‌ನಲ್ಲಿ ಸೋತ ಬಳಿಕ ಭಾರತದ ರಾಮನಾಥನ್‌ ರಾಮ್‌ಕುಮಾರ್‌ ಅವರು ಮಿಶ್ರ ಡಬಲ್ಸ್‌ನಲ್ಲೂ ಸೋಲನುಭವಿಸಿದ್ದಾರೆ. ಗುರುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ರಾಮನಾಥನ್‌-ಫ್ರಾನ್ಸ್‌ನ ಎಲಿಕ್ಸೇನ್‌ ಲೆಕೆಮಿಯಾ ಜೋಡಿ ಚೆಕ್‌ ಗಣರಾಜ್ಯದ ಲೂಸಿ ಹ್ರಡೆಕ್ಕಾ-ಈಕ್ವೆಡಾರ್‌ನ ಎಸ್ಕೋಬಾರ್‌ ಜೋಡಿಗೆ ಶರಣಾಯಿತು.

ಐಎನ್‌ಬಿಲ್‌: ಬೆಂಗ್ಳೂರು ತಂಡಗಳಿಗೆ ಮಿಶ್ರಫಲ

ಬೆಂಗಳೂರು: ಚೊಚ್ಚಲ ಆವೃತ್ತಿಯ 3ಗಿ3 ಇಂಡಿಯನ್‌ ನ್ಯಾಷನಲ್‌ ಬಾಸ್ಕೆಟ್‌ಬಾಲ್‌ ಲೀಗ್‌(ಐಎನ್‌ಬಿಎಲ್‌) ಫೈನಲ್ಸ್‌ ಶುಕ್ರವಾರ ಆರಂಭವಾಗಿದ್ದು, ಬೆಂಗಳೂರು ತಂಡಗಳು ಮಿಶ್ರ ಫಲಿತಾಂಶ ನೀಡಿವೆ. ಪುರುಷರ ವಿಭಾಗದ ‘ಬಿ’ ಗುಂಪಿನಲ್ಲಿ ಬೆಂಗಳೂರು ಮೊದಲ ಪಂದ್ಯದಲ್ಲಿ ಕಟಕ್‌ ವಿರುದ್ಧ ಸೋತರೂ, 2ನೇ ಪಂದ್ಯದಲ್ಲಿ ಕೋಲ್ಕತಾವನ್ನು ಮಣಿಸಿತು. 

ಶನಿವಾರ ಕೊನೆ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆಡಲಿದೆ. ಮಹಿಳಾ ವಿಭಾಗದಲ್ಲಿ ಬೆಂಗಳೂರು ಆರಂಭಿಕ ಎರಡು ಪಂದ್ಯಗಳಲ್ಲಿ ಭಾವ್‌ನಗರ ಹಾಗೂ ಭಿಲಾಯ್‌ ತಂಡಗಳ ವಿರುದ್ಧ ಸೋಲನುಭವಿಸಿತು. ಶನಿವಾರ ಇಂಧೋರ್‌ ವಿರುದ್ಧ ಆಡಲಿದೆ. ಇನ್ನು, ಅಂಡರ್‌-16 ಬಾಲಕರ ವಿಭಾಗದಲ್ಲಿ ಬೆಂಗಳೂರು ತಂಡ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಪೂರ್ವ ತಂಡಗಳೂ ಎರಡೂ ಪಂದ್ಯಗಳಲ್ಲಿ ಜಯಗಳಿಸಿದವು.

Follow Us:
Download App:
  • android
  • ios