ಬ್ರಾಡ್ ಹಡ್ಡಿನ್ ಆಸ್ಟ್ರೇಲಿಯಾ ಪರ 66 ಟೆಸ್ಟ್, 126 ಏಕದಿನ ಪಂದ್ಯಗಳನ್ನಾಡಿದ್ದಾರೆ.
ಮೆಲ್ಬೊನ್(ಆ.10): ಮಾಜಿ ವಿಕೆಟ್ ಕೀಪರ್ ಬ್ರಾಡ್ ಹಡ್ಡಿನ್ ಆಸ್ಟ್ರೇಲಿಯಾ ತಂಡದ ನೂತನ ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
39 ವರ್ಷದ ಹಡ್ಡಿನ್, ಗ್ರೆಗ್ ಬ್ಲೀವೆಟ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಹಡ್ಡಿನ್ 2019ರವರೆಗೂ ತಂಡದೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ಬ್ರಾಡ್ ಹಡ್ಡಿನ್ ಆಸ್ಟ್ರೇಲಿಯಾ ಪರ 66 ಟೆಸ್ಟ್, 126 ಏಕದಿನ ಪಂದ್ಯಗಳನ್ನಾಡಿದ್ದಾರೆ.
‘ನಾನು ಕ್ರಿಕೆಟ್ ಜಗತ್ತಿಗೆ ಹೊಸ ಶೈಲಿಯ ಕ್ಷೇತ್ರರಕ್ಷಣೆ ಪರಿಚಯಿಸಿದ ಸೈಮಂಡ್ಸ್ , ಪಾಂಟಿಂಗ್ ಅಂತಹ ಆಟಗಾರರೊಂದಿಗೆ ಹೆಚ್ಚು ಸಮಯ ಕಳೆದಿದ್ದೇನೆ. ಹೀಗಾಗಿ ಅಗತ್ಯ ಮಾರ್ಗದರ್ಶನ ನೀಡಲು ಸಿದ್ಧನಿದ್ದೇನೆ’ ಎಂದು ಹಡ್ಡಿನ್ ಹೇಳಿಕೊಂಡಿದ್ದಾರೆ.
