ನವದೆಹಲಿ[ಜು.14]: ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ಕಿರಣ್‌ ಮೋರೆ, ಅಮೆರಿಕ ಕ್ರಿಕೆಟ್‌ ತಂಡದ ಹಂಗಾಮಿ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಕಳೆದ ತಿಂಗಳಷ್ಟೇ ಅಮೆರಿಕ ಕ್ರಿಕೆಟ್‌ ಮಂಡಳಿಯ ನಿರ್ದೇಶಕರಾಗಿ ನೇಮಕಗೊಂಡಿದ್ದ ಅವರು, ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಕ್ರಿಕೆಟ್‌ಗೆ ಎಂಟ್ರಿಕೊಟ್ಟ ದೊಡ್ಡಣ್ಣ-ಅಮೆರಿಕಕ್ಕೆ ಏಕದಿನ ಮಾನ್ಯತೆ!

ಪ್ರಧಾನ ಕೋಚ್‌ ಆಗಿದ್ದ ಪುಬುಡು ದಾಸ್ಸಾನಾಯಕೆ ದಿಢೀರ್‌ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮೋರೆ ಹೆಗಲಿಗೆ ಕೋಚಿಂಗ್‌ ಜವಾಬ್ದಾರಿ ನೀಡಲಾಗಿದೆ. ಪುಬುಡು ದಾಸ್ಸಾನಾಯಕೆ ಮಾರ್ಗದರ್ಶನದಲ್ಲಿ ಹಾಂಕಾಂಗ್ ತಂಡವನ್ನು ಮಣಿಸಿ ಅಮೆರಿಕ ಐಸಿಸಿ ಏಕದಿನ ಮಾನ್ಯತೆ ಪಡೆದುಕೊಂಡಿತ್ತು. 

ಇದೇ ವೇಳೆ ಭಾರತದ ಮಾಜಿ ಆಟಗಾರರಾದ ಸುನಿಲ್‌ ಜೋಶಿ ಹಾಗೂ ಪ್ರವೀಣ್‌ ಆಮ್ರೆ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸುನಿಲ್ ಜೋಶಿ ಈ ಹಿಂದೆ ಬಾಂಗ್ಲಾದೇಶ ಸ್ಪಿನ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು.